ಹದಗೆಟ್ಟ ಮೂಡುಬಿದಿರೆ-ಬೆಳ್ಮಣ್ ಸಂಪರ್ಕ ರಸ್ತೆ : ಪ್ರತಿಭಟನಾ ಜಾಥಾ
*ಪಾಲಡ್ಕ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ ಗ್ರಾಮಸ್ಥರು
ಮೂಡುಬಿದಿರೆ: ಬೆಳ್ಮಣ್-ಮೂಡುಬಿದಿರೆ ಸಂಪರ್ಕ ರಸ್ತೆಯ ಪುತ್ತಿಗೆ ಪಾಲಡ್ಕ ರಸ್ತೆಯು ಭಾಗಶಃ ಕೆಟ್ಟು ಹೋಗಿದ್ದು ಇಲ್ಲಿ ವಾಹನ ಸಹಿತ ಜನ ಸಂಚಾರಕೆ ಕಷ್ಟ ಸಾಧ್ಯವಾಗಿದ್ದು ದುರಸ್ತಿ ಮಾಡಲು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗುಡ್ಡೆಯಂಗಡಿ ಬಸ್ ನಿಲ್ದಾಣದಿಂದ ಪಾಲಡ್ಕ ಮಾವಿನಕಟ್ಟೆಯವರೆಗೆ ಗ್ರಾಮಸ್ಥರು ಭಾನುವಾರ ಬೃಹತ್ ಪ್ರತಿಭಟನಾ ಜಾಥ ನಡೆಸಿದರು.
ಪ್ರತಿಭಟನೆಯ ಪ್ರಮುಖ ಪ್ರಶಾಂತ್ ಭಂಡಾರಿ, ಈ ರಸ್ತೆಯು ಜನನಿಬಿಡ, ವಾಹನ ದಟ್ಟನೆ ಇರುವ ರಸ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ರಸ್ತೆ ದುರಸ್ತಿ ಮಾಡುವಂತೆ ಹಲವಾರು ಬಾರಿ ಒತ್ತಾಯಿಸಿದ್ದೇವೆ. ಆದರೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಪುತ್ತಿಗೆ, ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಒಗ್ಗಾಟಾಗಿ ಪ್ರತಿಭಟನೆ ಮಾಡಿದ್ದು, ಸಂಬಂಧಪಟ್ಟರು ಶೀಘ್ರ ಸ್ಪಂದಿಸುವಂತೆ ಆಗ್ರಹಿಸುತ್ತೇವೆ ಎಂದರು.
ರಸ್ತೆಯಲ್ಲಿದ್ದ ಹೊಂಡಗಳಿಗೆ ಬಾಳೆಗಿಡಗಳನ್ನು ನೆಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದ ಗ್ರಾಮಸ್ಥರು ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸಿಕೊಡುವಂತೆ ಆಗ್ರಹಿಸಿದರು.
ಹೋರಾಟದ ಪ್ರಮುಖರಾದ ಅಶೋಕ್ ಹೆಗ್ಡೆ, ನಿವೃತ್ತ ಶಿಕ್ಷಕ ಅಂಡ್ರೋ ಡಿಸೋಜ, ಪುತ್ತಿಗೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ್ ಪಿ., ರೋಶನ್ ಸೆರವೊ ಗುಡ್ಡೆಯಂಗಡಿ ಪುತ್ತಿಗೆ ಹಾಗೂ ಪಾಲಡ್ಕ ಗ್ರಾಪಂ ಸ್ಥಳೀಯ ಜನಪ್ರತಿನಿಧಿಗಳು, ೩೦೦ಕ್ಕೂ ಅಧಿಕ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
0 Comments