ದಸರಾ ಬ್ಯುಸಿಯಲ್ಲಿದ್ದೆ, ಆದರೆ ಕೋಟ ನಮ್ಮ ವಿಪ್, ಅವರು ಕರೆದಾಗ ಬರಲೇಬೇಕು-ಯದುವೀರ್ ಒಡೆಯರ್

ಜಾಹೀರಾತು/Advertisment
ಜಾಹೀರಾತು/Advertisment

 ದಸರಾ ಬ್ಯುಸಿಯಲ್ಲಿದ್ದೆ, ಆದರೆ ಕೋಟ ನಮ್ಮ ವಿಪ್, ಅವರು ಕರೆದಾಗ ಬರಲೇಬೇಕು-ಯದುವೀರ್ ಒಡೆಯರ್

ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ, ಇದರ ವತಿಯಿಂದ ಲೇಖಕರು, ಸಾಹಿತಿಗಳು ಚುಟುಕು ಬರಹಗಾರರು, ಕವಿಗಳು, ಬರಹಗಾರರ ಸಮ್ಮೇಳನ ದಲ್ಲಿ ಮೈಸೂರು ಅರಮನೆಯ ಮಹಾರಾಜರು ಹಾಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಒಡೆಯರ್ ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 


ಈ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಒಡೆಯರ್ ಸಾಮಾನ್ಯವಾಗಿ ಈ ಸಂದರ್ಭದಲ್ಲಿ ನಾನು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಮೈಸೂರಿನಲ್ಲಿ ದಸರಾ ಸಂಭ್ರಮ. ಇಷ್ಟೊತ್ತಿಗೆ ಎಲ್ಲ ತಯಾರಿಗಳು ನಡೆಯುತ್ತಿರುತ್ತವೆ. ಹೀಗಾಗಿ ಪ್ರತಿ ವರ್ಷವೂ ನಾನು ಒಂದಷ್ಟು ದಿನಗಳ ಮುಂಚಿತವಾಗಿ ದಸರಾ ಆಚರಣೆಯ ತಯಾರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆದರೆ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರು ಲೋಕಸಭೆಯಲ್ಲಿ ನಮಗೆಲ್ಲ ವಿಪ್ ಆಗಿದ್ದಾರೆ. ನಮ್ಮ ಲೀಡರ್ ಕರೆದ ತಕ್ಷಣ ಬರುವುದು ನಮ್ಮ ಅನಿವಾರ್ಯತೆ. ಹೀಗಾಗಿ ದಸರಾ ಕಾರ್ಯಕ್ರಮದ ತಯಾರಿಯ ನಡುವೆಯೂ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಮತ್ತು ಈ ಕಾರ್ಯಕ್ರಮ ನನಗೆ ಖುಷಿಯನ್ನು ತಂದಿದೆ ಎಂದು ಯದುವೀರ್ ಒಡೆಯರ್ ಹೇಳಿದರು.


ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಉಡುಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ವಿಜಯ್ ಕೊಡವೂರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments