ಮೂಡುಬಿದಿರೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ವತಿಯಿಂದ 61 ನೇ ವರ್ಷದ ಗಣೇಶನ ವಿಗ್ರಹ ಪ್ರತಿಷ್ಠಾಪನೆ
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ (ರಿ) ಇದರ ಆಶ್ರಯದಲ್ಲಿ 61ನೇ ವರ್ಷದ ಗಣೇಶನ ವಿಗ್ರಹವನ್ನು ಶನಿವಾರ ಬೆಳಿಗ್ಗೆ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ್ ಭಟ್ ಪ್ರತಿಷ್ಠಾಪಿಸಿದರು.
ಮಂಗಳೂರು ಪೊಲೀಸ್ ಅನುಪಮ್ ಅಗರ್ವಾಲ್ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿ, ಗಣೇಶನ ವಿಗ್ರಹಕ್ಕೆ ಹಾರಾರ್ಪಣೆಗೈದು ಮಾತನಾಡಿ ಹಬ್ಬಗಳು ಸಹಬಾಳ್ವೆಯ ಪತ್ರೀಕ. ಗಣೇಶ ವಿಘ್ನ ನಿವಾರಕ ಮತ್ತು ಎಲ್ಲರನ್ನೂ ಒಟ್ಟುಗೂಡಿಸುವಾತ ಆತನ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಶುಭ ಹಾರೈಸಿದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ , ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್, ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ, ಉಪಾಧ್ಯಕ್ಷರುಗಳಾದ ಚೌಟರ ಅರಮನೆಯ ಕುಲದೀಪ್ ಎಂ., ಜಯಶ್ರೀ ಅಮರನಾಥ ಶೆಟ್ಟಿ, ಕೆ.ಕೃಷ್ಣರಾಜ ಹೆಗ್ಡೆ, ಜತೆ ಕಾರ್ಯದರ್ಶಿ ಸುದರ್ಶನ್ ಎಂ., ಸಂಚಾಲಕ ರಾಜಾರಾಮ್ ನಾಗರಕಟ್ಟೆ ಉಪಸ್ಥಿತರಿದ್ದರು.
0 Comments