ಅಶ್ವತ್ಥಪುರದಲ್ಲಿ ಪೂಜಿಸಲ್ಪಟ್ಟ 18 ನೇ ವರ್ಷದ ಸಾರ್ವಜನಿಕ ಗಣಪತಿ
ಮೂಡುಬಿದಿರೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಡಗಮಿಜಾರು ಅಶ್ವತ್ಥಪುರ ಇದರ ವತಿಯಿಂದ 18 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಅಶ್ವತ್ಥಪುರ ಯುವಕ ಮಂಡಲದ ವಠಾರದಲ್ಲಿ ಜರುಗಿತು.
ಮೂಡುಬಿದಿರೆಯ ವೇ.ಮೂ.ರಾಮಚಂದ್ರ ಭಟ್ ಇವರ ಪೌರೋಹಿತ್ಯದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾದ ಎ.ಕೆ.ಉಮಾನಾಥ ದೇವಾಡಿಗ, ಅಧ್ಯಕ್ಷ ಪುರುಷೋತ್ತಮ ಮೇಸ್ತ್ರಿ ಕುಕ್ಕುದಡಿ, ಉಪಾಧ್ಯಕ್ಷ ರಾದ ಉಮೇಶ್ ಶೆಟ್ಟಿ ಮರಕಡ, ವಿಜಯಕುಮಾರ್ ಕೊಂಡೆಬೆಟ್ಟು, ಕಾರ್ಯದರ್ಶಿ ಸುರೇಶ್ ಎಸ್.ದೇವಾಡಿಗ ಕೊಂಡೆಬೆಟ್ಟು, ಜತೆ ಕಾರ್ಯದರ್ಶಿಗಳಾದ ಸೋಮನಾಥ ದೇವಾಡಿಗ ಅಶ್ವತ್ಥಪುರ, ಸಂತೋಷ್ ಶೆಟ್ಟಿ ಕುಕ್ಕುದಡಿ, ಎಂಪಿ ಪ್ರಕಾಶ್ ಪಾದೆಮನೆ,ಗೌರವ ಮಾರ್ಗದರ್ಶಕರಾದ ಅಶ್ವತ್ಥಾಮ ವಿ.ಎಸ್. ಹಾಗೂ ಕೋಶಾಧಿಕಾರಿಗಳಾದ ಸಂತೋಷ್ ಶೆಟ್ಟಿ ಅಶ್ವತ್ಥಪುರ ಮತ್ತು ಶಿವಕುಮಾರ್ ಶೆಟ್ಟಿ ಕೊಂಡಬೆಟ್ಟು ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments