ರೋಟರಿ ಟೆಂಪಲ್ ಟೌನ್‌ನಿಂದ ಶಿಕ್ಷಕರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ರೋಟರಿ ಟೆಂಪಲ್ ಟೌನ್‌ನಿಂದ ಶಿಕ್ಷಕರ ದಿನಾಚರಣೆ


ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‌ಟೌನ್ ವತಿಯಿಂದ ಶಿಕ್ಷಕರ ದಿನಾಚರಣೆ ಗುರುವಾರ ರೋಟರಿ ಟೆಂಪಲ್‌ಟೌನ್ ಪಾರ್ಕ್ನಲ್ಲಿ ನಡೆಯಿತು. 

ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಮುನಿರಾಜ ರೆಂಜಾಳ, ಪ್ರೇಮಲತಾ ಪವನ್ಕಾರ್, ಸಂಧ್ಯಾ ಆರ್ ಶೆಣೈ ಹಾಗೂ ಪ್ರಾಂತ್ಯ ಪ್ರೌಢಶಾಲೆಯ ಶಿಕ್ಷಕಿ ರತ್ನಾವತಿ ಆಚಾರ್ ಕೆ. ಅವರಿಗೆ ನ್ಯಾಶನಲ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು ಹಾಗೂ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಜಯಂತಿ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಮೂಡುಬಿದಿರೆ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರನ್ನು ಸನ್ಮಾನಿಸಲಾಯಿತು.

ಮುನಿರಾಜ ರೆಂಜಾಳ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ರೋಟರಿ ವಲಯ ಸೇನಾನಿ ಪ್ರವೀಣ್ ಪಿರೇರಾ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯ ಕುರಿತು ವಿವರ ನೀಡಿದರು. 

ಹರೀಶ್ ಕಾಪಿಕಾಡ್ ಸನ್ಮಾನಿತರನ್ನು ಪರಿಚಯಿಸಿದರು.

ಅಲಕಾ ಬಲರಾಮ್, ಶಂಕರ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಎಂ.ಕೆ ವಂದಿಸಿದರು

Post a Comment

0 Comments