*ಇಂದು (ಸೆ.3) ಮೂಡುಬಿದಿರೆಯಲ್ಲಿ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆ ಉದ್ಘಾಟನೆ.*
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಶ್ರೀ ಧವಲಾ ಕಾಲೇಜು ಮೂಡಬಿದ್ರೆ ಇವರ ಸಹಯೋಗದೊಂದಿಗೆ 2024 -25 ನೇ ಸಾಲಿನ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯ ಉದ್ಘಾಟನೆ ನಡೆಯಲಿದೆ.
'ಕನಕದಾಸರ ಕಾವ್ಯ : ರಸ ವಿನ್ಯಾಸ' ಎಂಬ ಪರಿಕಲ್ಪನೆಯಡಿ ನಡೆಯುವ ಈ ಸರಣಿಯ ಉದ್ಘಾಟನೆ ಮತ್ತು ಮೊದಲ ಉಪನ್ಯಾಸವನ್ನು ಇಂದು ಅಪರಾಹ್ನ 2:30 ರಿಂದ ಶ್ರೀ ಧವಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕರಾದ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿರುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಾರ್ಶ್ವನಾಥ ಅಜ್ರಿ ವಹಿಸಲಿದ್ದಾರೆ. ಮಂಗಳೂರು ವಿವಿಯ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಶ್ರೀಧವಲಾ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮಲ್ಲಿಕಾ ರಾವ್ ಉಪಸ್ಥಿತರಿರುವರು ಎಂದು ಕನಕದಾಸ ಸಂಶೋಧನ ಕೇಂದ್ರದ ಪ್ರಕಟಣೆ ತಿಳಿಸಿದೆ.
0 Comments