ಮೂಡುಬಿದಿರೆ: ವೃದ್ಧೆಯ ಕುತ್ತಿಗೆಯಿಂದ ಚೈನ್ ಎಳೆದು ಪರಾರಿಯಾದ ಖದೀಮರು

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ: 
ವೃದ್ಧೆಯ ಕುತ್ತಿಗೆಯಿಂದ ಚೈನ್ ಎಳೆದು ಪರಾರಿಯಾದ ಖದೀಮರು
 
ಮೂಡುಬಿದಿರೆ : ದ್ವಿಚಕ್ರ ವಾಹನ ಸವಾರರಿಬ್ಬರು ವೃದ್ಧೆಯೋರ್ವರ ಬಳಿ  ದಾರಿ ಕೇಳುವ  ನೆಪದಲ್ಲಿ  ಮಾತನಾಡಿ ಆಕೆಯ ಕುತ್ತಿಗೆಯಲ್ಲಿದ್ದ 3 ಪವನಿನ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ತಾಲೂಕಿನ ಪಡುಮಾರ್ನಾಡು ಗ್ರಾ.ಪಂ.ನ ಮಾರ್ನಾಡಿನಲ್ಲಿಸೋಮವಾರ ಮಧ್ಯಾಹ್ನ ನಡೆದಿದೆ.
 
 ಮಾರ್ನಾಡು ವರ್ಧಮಾನ  ಬಸದಿ ಬಳಿಯ 82 ರ ವಯಸ್ಸಿನ ವೃದ್ಧೆ ಪ್ರೇಮಾ ಅವರು ತಮ್ಮ ಮನೆಯ ಸಮೀಪದ ಅಂಗಡಿಯಿಂದ ಹಾಲು ಹಾಲು ತರುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಸವಾರರಿಬ್ಬರು ವೃದ್ಧೆಯ ಬಳಿ ಗಾಡಿ ನಿಲ್ಲಿಸಿ ಇಲ್ಲಿ ಮಠ ಎಲ್ಲಿ ಎಂದು ವಿಚಾರಿಸಿದ್ದು ಆಗ ಆಕೆ ಮಠ ಇಲ್ಲಿ ಇಲ್ಲ ಅದು ಬನ್ನಡ್ಕದಲ್ಲಿದೆ ಎಂದು ಹೇಳುತ್ತಿದ್ದಂತೆ ಆಕೆಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿದ್ದಾರೆ.

 ಈರ್ವರು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಸಹಿತ ರೈನ್ ಕೋಟ್ ಧರಿಸಿ ಮಾರ್ನಾಡು ಕಡೆಯಿಂದ ಆಗಮಿಸಿದ ಆರೋಪಿಗಳು ನಂತರ ತಂಡ್ರಕೆರೆ ಕಡೆಗೆ ಸಾಗಿರುವುದಾಗಿ ತಿಳಿದು ಬಂದಿದೆ.

ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದ್ದು ಪರಿಸರದ ಸಿಸಿಟಿವಿ ದಾಖಲಾತಿಗಳನ್ನು ಪರೀಕ್ಷಿಸಲಾಗುತ್ತಿದೆ.

Post a Comment

0 Comments

Advertisement