ಮಂಗನಿಂದ ದಾಳಿ: ಶಿತಾ೯ಡಿಯಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲು

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮಂಗನಿಂದ ದಾಳಿ: ಶಿತಾ೯ಡಿಯಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲು

      ಮೂಡುಬಿದಿರೆ : ಶಿತಾ೯ಡಿಯಲ್ಲಿ ಮಂಗವೊಂದು ದಾಳಿ ನಡೆಸಿದ ಪರಿಣಾಮವಾಗಿ  ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇತ್ತೀಚೆಗೆ ನಡೆದಿದೆ.
   
 ಶಿರ್ತಾಡಿ ಕಜೆ ಪರಿಸರದ ಬಲರಾಮ ಭಟ್ ಹಾಗೂ ಅಳಿಯೂರಿನ ವನಿತ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.
‌    ಮೊದಲಿಗೆ ಶಿರ್ತಾಡಿ ಕಜೆಯಲ್ಲಿದ್ದ ಮಂಗವು ಬಲರಾಮ ಭಟ್ ಅವರ ಮೇಲೆ ದಾಳಿ ನಡೆಸಿತ್ತು. ಬಳಿಕ ಅಳಿಯೂರಿಗೆ ಹೋದ ಮಂಗವು ಅಲ್ಲಿನ ವನಿತ್ ಅವರ ಮೇಲೂ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
    ಮಂಗನ ದಾಳಿಗೊಳಗಾದ ಇಬ್ಬರೂ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
    ಮಂಗನ ಒಂದು ಕೈ ಗೆಗಾಯವಾಗಿದೆ ಯೆನ್ನಲಾಗುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಹಿಡಿಯಲು ಪ್ರಯತ್ನಪಟ್ಟಿದ್ದಾರೆ.ಮಂಗನ ದಾಳಿಯಿಂದ ಸ್ಥಳೀಯ ಪರಿಸರದ ಜನರು ಆತಂಕಕ್ಕೊಳಗಾಗಿದ್ದಾರೆ

Post a Comment

0 Comments

Advertisement