ಮೋದಿ ಬತ್೯ಡೇ : ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದಿಂದ ಹನುಮಂತನಿಗೆ ವಿಶೇಷ ಪೂಜೆ
ಮೂಡುಬಿದಿರೆ : ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಮುಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ಮೂಡುಬಿದಿರೆ ಶ್ರೀ ಹನುಮಂತ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಗುರುವಾರ ನೆರವೇರಿಸಲಾಯಿತು.
ಮಂಡಲದ ಅಧ್ಯಕ್ಷರಾದ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ,ಕೋಶಾಧಿಕಾರಿ ಪ್ರಭಾಕರ್ ಕುಲಾಲ್, ಪ್ರಮುಖರಾದ ಬೋಳ ವಿಶ್ವನಾಥ್ ಕಾಮತ್, ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಎಸ್. ಟಿ ಮೋರ್ಚಾದ ಅಧ್ಯಕ್ಷ ಅಣ್ಣಪ್ಪ ಕೆ.ಎಸ್,ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಯಶವಂತ ಮಾಸ್ತಿಕಟ್ಟೆ ಹಾಗೂ ಪಕ್ಷದ ಅನನ್ಯ ಜವಾಬ್ದಾರಿಯುತ ಪ್ರಮುಖರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಈ ಸಂದಭ೯ದಲ್ಲಿದ್ದರು.

0 Comments