ಮೂಡುಬಿದಿರೆ : ಇಲ್ಲಿನ ಸಮಾಜ ಮಂದಿರದ ಸಾವ೯ಜನಿಕ ಗಣೇಶೋತ್ಸವದ ಪ್ರಯುಕ್ತ
ಮೂಡಬಿದ್ರೆ ಪೇಟೆಯಲ್ಲಿ ಸೆ. 18 ಶುಕ್ರವಾರದಂದು ಗಣೇಶ ದೇವರ ಮೂರ್ತಿಯ ಶೋಭಾಯಾತ್ರೆ ಮೆರವಣೆಗೆ ಇರುವುದರಿಂದ ಮಧ್ನಾಹ್ಯ 1.00 ಗಂಟೆಯಿಂದ ಮೂಡುಬಿದಿರೆ ಪೇಟೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಮಧ್ನಾಹ್ಯ 2-00ಗಂಟೆಯ ಬಳಿಕ ವಾಹನಗಳ ಸಂಚಾರದ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
*ಮಂಗಳೂರು ನಿಂದ ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಇನ್ನರ್ ವ್ಹೀಲ್ ಸಕ೯ಲ್, ರಿಂಗ್ ರೋಡ್ ,ಅಲಂಗಾರು ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸುವುದು.
*ಮಂಗಳೂರಿನಿಂದ ಮೂಡುಬಿದಿರೆ ಬೆಳ್ತಂಗಡಿ, ಬಂಟ್ವಾಳ ಕಡೆಗಳಿಗೆ ಸಂಚರಿಸುವ ವಾಹನಗಳು ಮೂಡುಬಿದಿರೆಯ ಹೊರವರ್ತುಲ್ ರಸ್ತೆಯಾದ ವಿದ್ಯಾಗಿರಿ-ಮಾಸ್ತಿಕಟ್ಟೆ ಕ್ರಾಸ್ ರಸ್ತೆ, ಮಾಸ್ತಿಕಟ್ಟೆ, ಪೇಪರ್ ಮಿಲ್ ಕ್ರಾಸ್ ರಸ್ತೆ , ಪೇಪರ್ ಮಿಲ್ಲ್ ಆಗಿ ಬಂಟ್ವಾಳ ಕಡೆಗೆ ಕೀರ್ತಿನಗರವಾಗಿ ಬೆಳ್ತಂಗಡಿ ಕಡೆಗೆ ಸಂಚರಿಸುವುದು.
*ಮೂಡುಬಿದಿರೆಯಿಂದ ಶಿರ್ತಾಡಿ ಕಡೆಗೆ ಸಂಚರಿಸುವವರು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಇನ್ನರ್ ವೀಲ್ ಸಕ೯ಲ್ ರಿಂಗ್ ರೋಡ್ ,ಅಲಂಗಾರು ಜೈನ್ ಪೇಟೆ ಮಾರ್ಗವಾಗಿ ಶಿರ್ತಾಡಿ ಕಡೆಗೆ ಸಂಚರಿಸುವುದು.
*ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಪೇಪರ್ ಮಿಲ್, ಮಾಸ್ತಿಕಟ್ಟೆ, ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
*ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘು ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಸತ್ಯನಾರಾಯಣ ದೇವಸ್ಥಾನ, ಅಮರಶ್ರೀ ಟಾಕೀಸ್, ಮೂಡುಬಿದಿರೆ ಸರಕಾರಿ ಆಸ್ಪತ್ರೆ ಬಳಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ, ವಿದ್ಯಾಗಿರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
*ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಮಂಗಳೂರು,ಕಾರ್ಕಳ ಕಡೆಗೆ ಸಂಚರಿಸುವ ವಾಹನಗಳು ಮೂಡುಬಿದಿರೆ ಹೊರವರ್ತುಲ ರಸ್ತೆಯಾದ ಮಹಾವೀರ ಕಾಲೇಜು ಕೊಡಂಗಲ್ಲು ಕ್ರಾಸ್, ಕೋಟೆಬಾಗಿಲು, ಜೈನ್ ಪೇಟೆ ಅಲಂಗಾರ ಮಾರ್ಗವಾಗಿ ಸಂಚರಿಸುವುದು.
*ಗಣೇಶೋತ್ಸವ ಮೆರವಣಿಗೆ ಬರುವ ಸಾರ್ವಜನಿಕರು ತಮ್ಮ ವಾಹನವನ್ನು ಪೊಲೀಸ್ ಬಳಿ ಶಾಲಾ ಮೈದಾನ ,ಕೆಇಬಿ ಬಳಿ, ಕೈಕಂಬ ಜಂಕ್ಷನ್ ಬಳಿ ಇರುವ ಖಾಲಿ ಜಾಗ ಹಾಗೂ ಸ್ವರಾಜ್ಯ ಮೈದಾನ ಬಳಿ , ಕನ್ನಡ ಭವನದ ಬಳಿ ಮಾಸ್ತಿಕಟ್ಟೆ ಬಳಿ ,ಕೋಟ್೯ ರೋಡ್ ಬಳಿ ಪಾರ್ಕಿಂಗ್ ಮಾಡುವುದು.
*ಮೂಡುಬಿದಿರೆ ಪೇಟೆ ಬಸ್ ನಿಲ್ದಾಣ ಬಳಿ, ಸಮಾಜ ಮಂದಿರ ಬಳಿ, ಮಾಕೆ೯ಟ್ ಕಟ್ಟಡ ಬಳಿ, ಹನುಮಾನ ದೇವಸ್ಥಾನ ಬಳಿ, ಮಸೀದಿ ರಸ್ತೆಯಲ್ಲಿ ,ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ , ಪುರಸಭೆಯ ರಸ್ತೆಯಲ್ಲಿ ,ಪಟ್ಟಾಡಿ ರಸ್ತೆಯಲ್ಲಿ ಅಮರಶ್ರೀ ಟಾಕೀಸ್ ರಸ್ತೆಯಲ್ಲಿ ಜಿವಿ ಪೈ ಆಸ್ಪತ್ರೆ ಬಳಿ, ನಿಶ್ಮಿತಾ ಸರ್ಕಲ್ ಬಳಿ, ಐ.ಬಿ ರೋಡ್ ಬಳಿ ವಾಹನಗಳ ಪಾರ್ಕಿಂಗ್ ನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ, ಸಾರ್ವಜನಿಕರು ವಾಹನ ಸಂಚಾರದ ಸಮಯ ಪೊಲೀಸರೊಂದಿಗೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸುವಂತೆ ಮೂಡುಬಿದಿರೆ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.

0 Comments