ಕರ್ನಾಟಕ ಗಮಕ ಕಲಾ ಪರಿಷತ್ತು ಮೂಡುಬಿದಿರೆ ತಾ. ಘಟಕದ ಅಧ್ಯಕ್ಷರಾಗಿ ಡಾ. ಸುಬ್ರಹ್ಮಣ್ಯ ಪದ್ಯಾಣ
ಮೂಡುಬಿದಿರೆ : ಕರ್ನಾಟಕ
ಗಮಕ ಕಲಾ ಪರಿಷತ್ತು ಇದರ ಮೂಡುಬಿದಿರೆ ತಾಲ್ಲೂಕು ಘಟಕದ ಸ್ಥಾಪಕ ಅಧ್ಯಕ್ಷರಾಗಿ ಡಾ/ ಪದ್ಯಾಣ ಆಯ್ಕೆಯಾಗಿದ್ದಾರೆ.
ಗಮಕ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಗಮಕಿ ಮಧೂರು ಮೋಹನ ಕಲ್ಲೂರಾಯರ ಮಾರ್ಗದರ್ಶನದಲ್ಲಿ, ಅಲಂಗಾರು ಸುಬ್ರಹ್ಮಣ್ಯ ಭಟ್ಟರ ಉಪಸ್ಥಿತಿಯಲ್ಲಿ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ನೂತನ ಘಟಕವನ್ನು ಸ್ಥಾಪಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆ. ಶ್ರೀಪತಿ ಭಟ್, ಕಾರ್ಯದರ್ಶಿಯಾಗಿ ಲೆಕ್ಕಪರಿಶೋಧಕ ಪುತ್ತಿಗೆ ಬಾಲಕೃಷ್ಣ ಭಟ್ ಆರಿಸಲ್ಪಟ್ಟರು. ಇತರ ಪದಾಧಿಕಾರಿಗಳಾಗಿ,ಕೆ. ಶ್ರೀಪತಿ ಭಟ್ (ಗೌರವಾಧ್ಯಕ್ಷರು), ಡಾ. ಎಂ. ಮೋಹನ ಆಳ್ವ ಸುಬ್ರಹ್ಮಣ್ಯ ಭಟ್ ಅಲಂಗಾರು, ಡಾ. ಪುಂಡಿಕಾಯಿ ಗಣಪಯ್ಯ ಭಟ್, ಡಾ. ಯೋಗೀ ಸುಧಾಕರ ತಂತ್ರಿ (ಗೌರವ ಸಲಹೆಗಾರರು), ಡಾ. ರಾಧಾಕೃಷ್ಣ ಶೆಟ್ಟಿ(ಉಪಾಧ್ಯಕ್ಷ), ಸದಾನಂದ ನಾರಾವಿ ಮತ್ತು ವೆಂಕಟರಮಣ ಕೆರೆಗದ್ದೆ (ಜತೆ ಕಾರ್ಯದರ್ಶಿಗಳು), ಡಾ. ರಾಮಕೃಷ್ಣ ಶಿರೂರು (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.

0 Comments