ಮೂಡುಬಿದಿರೆ : ತಾಲೂಕು ಮಟ್ಟದ ಪ. ಪೂ. ಕಾಲೇಜುಗಳ ಬಾಲಕರ ವಿಭಾಗದ ಫುಟ್ಬಾಲ್ ಪಂದ್ಯಾಟ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಮೂಡುಬಿದಿರೆ : ತಾಲೂಕು ಮಟ್ಟದ ಪ. ಪೂ. ಕಾಲೇಜುಗಳ ಬಾಲಕರ ವಿಭಾಗದ ಫುಟ್ಬಾಲ್ ಪಂದ್ಯಾಟ 

ಮೂಡುಬಿದಿರೆ : “ಫುಟ್ಬಾಲ್ ಕೇವಲ ಚೆಂಡಿನೊಂದಿಗೆ ಆಡುವ ಆಟವಲ್ಲ; ಅದು ಗುರಿ, ಶಿಸ್ತು, ಸಹಕಾರ, ಸಮಯಪ್ರಜ್ಞೆ, ಸೋಲು–ಗೆಲುವಿನ ಸಮಚಿತ್ತತೆ ಹಾಗೂ ಕೊನೆಯ ಕ್ಷಣದವರೆಗೂ ಹೋರಾಡುವ ಮನೋಭಾವವನ್ನು ಕಲಿಸುವ ಬದುಕಿನ ಪಾಠಶಾಲೆ” ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು, ದ.ಕ. ಜಿಲ್ಲೆ ಹಾಗೂ ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಕಲ್ಲಬೆಟ್ಟು, ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾದ 2026–27ನೇ ಸಾಲಿನ ಮೂಡುಬಿದಿರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಫುಟ್ಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಫುಟ್ಬಾಲ್ ಆಟದ ವಿವಿಧ ಆಯಾಮಗಳನ್ನು ಬದುಕಿನೊಂದಿಗೆ ಬೆಸೆದು ವಿದ್ಯಾರ್ಥಿಗಳಿಗೆ ಅರ್ಥಪೂರ್ಣ ಸಂದೇಶ ನೀಡಿದ ಅವರು, “ಗುರಿಯಿಲ್ಲದ ಓಟಕ್ಕೆ ಅರ್ಥವಿಲ್ಲ. ಮೈದಾನದ ಒಂದು ತುದಿಯಿಂದ ಮತ್ತೊಂದು ತುದಿಗೆ ಎಷ್ಟೇ ಓಡಿದರೂ ಕಣ್ಣೆದುರು ಗೋಲ್‌ಪೋಸ್ಟ್ ಇಲ್ಲದಿದ್ದರೆ ಆ ಓಟ ವ್ಯರ್ಥವಾಗುತ್ತದೆ. ಬದುಕಿಗೂ ಒಂದು ಸ್ಪಷ್ಟ ಗುರಿ ಇರಬೇಕು” ಎಂದರು. 

 ರಾಜಸಭಾಂಗಣದ ಮುಂದಿನ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಫುಟ್ಬಾಲ್ ತರಬೇತುದಾರ ಸುರೇಶ್ ಶೆಟ್ಟಿ ಲಾಡಿ ಪಂದ್ಯಾಟಕ್ಕೆ ಚಾಲನೆ ನೀಡಿ, ಫುಟ್ಬಾಲ್ ಶಿಸ್ತಿನ ಆಟವಾಗಿದ್ದು, ತೀರ್ಪುಗಾರರ ತೀರ್ಪನ್ನು ಗೌರವಿಸಿ ಆಟವಾಡುವ ಮೂಲಕ ಜೀವನದಲ್ಲಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಧೈರ್ಯವನ್ನು ಆಟಗಾರರು ಗಳಿಸುತ್ತಾರೆ ಎಂದರು.

ಮೂಡುಬಿದಿರೆ ತಾಲೂಕು ಪದವಿಪೂರ್ವ ಕಾಲೇಜುಗಳ ಕ್ರೀಡಾ ಸಂಚಾಲಕ ನವೀನ್ ಹೆಗ್ಡೆ ಮಾತನಾಡಿ, ಪ್ರತಿಯೊಂದು ಪಂದ್ಯವೂ ಒಂದೊಂದು ಅನುಭವವನ್ನು ನೀಡುತ್ತದೆ. ಆ ಅನುಭವಗಳಿಂದಲೇ ಆಟಗಾರರು ತಮ್ಮನ್ನು ತಾವು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ  ರಶ್ಮಿತಾ ಜೈನ್ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ಪುಷ್ಪರಾಜ್ ಬಿ. ಗೌರವ ಉಪಸ್ಥಿತರಿದ್ದು ಶುಭಹಾರೈಸಿದರು. 

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸುನಾದ್ ರಾಜ್ ಜೈನ್ ಸ್ವಾಗತಿಸಿದರು. ಉಪನ್ಯಾಸಕ ಎಡ್ವರ್ಡ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಉಪನ್ಯಾಸಕ ಲೆಫ್ಟಿನೆಂಟ್ ಮಹೇಂದ್ರ ಜೈನ್ ಧನ್ಯವಾದ ಸಮರ್ಪಿಸಿದರು.

Post a Comment

0 Comments

Advertisement