ಹಾಲು ಉತ್ಪನ್ನ, ಹಾಲು ಮಾರಾಟ: ಉಷಾ ಡಿ.ಪೈಗೆ ದ್ವಿತೀಯ ಸ್ಥಾನ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧಿಕೃತ ಡೀಲರ್ ಮೂಡುಬಿದಿರೆಯ ಉಷಾ ಡಿ.ಪೈಯವರು 2023-24ನೇ ಸಾಲಿನಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಮಂಗಳೂರು ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಉಷಾ ಡಿ.ಪೈಯವರನ್ನು ಅಬಿನಂದನಾ ಪತ್ರದೊಂದಿಗೆ ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಗೌರವಿಸಿದರು.
ಒಕ್ಕೂಟದ ಕಾರ್ಯನಿರ್ವಾಹಕ ವಿವೇಕ್, ವ್ಯವಸ್ಥಾಪಕ ರವಿರಾಜ ಉಡುಪ ಉಪಸ್ಥಿತರಿದ್ದರು.
ಉಷಾ ಪೈಯವರು ಮೂಡುಬಿದಿರೆಯ ಪತ್ರಿಕಾ ವಿತರಕ ಎಂ.ದಯಾನಂದ ಪೈ ಅವರ ಪತ್ನಿ.
0 Comments