ರಾಜ್ಯ ಮಟ್ಟದ ಕರಾಟೆ ಸ್ಪರ್ದೆ: ರೆಡ್ ಕಾರ್ಮೆಲ್ ಚಾಂಪಿಯನ್
ಮೂಡುಬಿದಿರೆ : ಇಲ್ಲಿನ ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ ರಾಜ್ಯ ಮಟ್ಟದ 21ನೇ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮಂಗಳೂರು ಕೆಲರಾಯ್ ರೆಡ್ ಕಾರ್ಮೇಲ್ ಶಾಲೆ ಚಾಂಪಿಯನ್ ಆಗಿದೆ. ರನ್ನರ್ ಅಪ್ ಪ್ರಶಸ್ತಿಯನ್ನು ಅಡ್ಯಾರ್‌ನ ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಗಳಿಸಿದೆ. ತೃತೀಯ ಪ್ರಶಸ್ತಿಯನ್ನು ಬೆಳುವಾಯಿಯ ಮರಿಯಂ ನಿಕೇತನ ತಂಡವು ಗಳಿಸಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಎಂ.ಕೆ ಅನಂತ್‌ರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಧನಂಜಯ ಶೆಟ್ಟಿ, ರಾಜ್ಯ ಕರಾಟೆ ಅಸೋಸಿಯೇಶನ್‌ನ ಉಪಾಧ್ಯಕ್ಷ ಸತೀಶ್ ಬೆಳ್ಮಣ್, ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಭಾಗವಹಿಸಿದರು. ವೇದಿಕೆಯಲ್ಲಿ ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್‌ನ ಅಧ್ಯಕ್ಷ ಮಹಮ್ಮದ್ ನದೀಂ, ಕರಾಟೆ ಶಿಕ್ಷಕ ಸರ್ಫ್ರಾಜ್, ರಾಜೇಶ್, ರಹಿಮಾನ್ ಉಪಸ್ಥಿತರಿದ್ದರು.
ಸ್ವಾಮಿ ಸ್ಟ್ರೆಂತ್ ಅಕಾಡೆಮಿ ಮತ್ತು ಎಂ.ಕೆ ಅಂನತ್‌ರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ನಡೆದ ಈ ಸ್ಪರ್ಧೆಯಲ್ಲಿ 14ರೊಳಗಿನ ವಯೋಮಿತಿ, 17 ರೊಳಗಿನ ವಯೋಮಿತಿ ಹಾಗೂ 17ರ ನಂತರದ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 120 ಶಿಕ್ಷಣ ಸಂಸ್ಥೆಗಳ 920 ವಿದ್ಯಾರ್ಥಿಗಳು ಭಾಗವಹಿಸಿದರು.
0 Comments