ಕಡಂದಲೆ ಶಾಂಭವಿ ನದಿಯಲ್ಲಿ ದನದ ತಲೆಗಳು ಪತ್ತೆ

ಜಾಹೀರಾತು/Advertisment
ಜಾಹೀರಾತು/Advertisment

 ಕಡಂದಲೆ ಶಾಂಭವಿ ನದಿಯಲ್ಲಿ ದನದ ತಲೆಗಳು ಪತ್ತೆ 

ಮೂಡುಬಿದಿರೆ: ತಾಲೂಕಿನ ಕಡಂದಲೆ ಶಾಂಭವೀ ನದಿಯಲ್ಲಿ  ತೇಲುತ್ತಿದ್ದ ದನದ ತಲೆಗಳನ್ನು ಸ್ಥಳೀಯರು ಬುಧವಾರ ಬೆಳಿಗ್ಗೆ  ಪತ್ತೆ ಮಾಡಿದ್ದಾರೆ.


 ದನವನ್ನು ಕೊಂದು ಮಾಸ ಮಾಡಿದ ನಂತರ  ಅದರ ತಲೆಗಳನ್ನು ಮತ್ತು ಕರುಳನ್ನು ನದಿಗೆ ತಂದು ಹಾಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಸಾಯಿ ಖಾನೆ?


ಈ ಪರಿಸರದಲ್ಲಿ ಅಕ್ರಮ ಕಸಾಯಿ ಖಾನೆ ಇದೆಯೇ ಎಂಬ ಪ್ರಶ್ನೆ ಈಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ

ನಿನ್ನೆ ದನ ಹಾಗೂ ಕರುವನ್ನು ಹತ್ಯೆ ಮಾಡಿ ಬಳಿಕ ಅದರ ತಲೆಗಳನ್ನು ಈ ನದಿಗೆ ಹಾಕಲಾಗಿದೆ. ಈ ಪರಿಸರದಲ್ಲಿ ಅಶಾಂತಿ ಕದಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Post a Comment

0 Comments