ಬಸ್ಸಿನಲ್ಲಿ ಹೃದಯಾಘಾತ

ಜಾಹೀರಾತು/Advertisment
ಜಾಹೀರಾತು/Advertisment

 ಬಸ್ಸಿನಲ್ಲಿ ಹೃದಯಾಘಾತ

ಮೂಡುಬಿದಿರೆ:ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೊಳಗಾಗಿ ಸಾವನಪ್ಪಿದ ಘಟನೆ ಶನಿವಾರ ಮೂಡುಬಿದಿರೆಯಲ್ಲಿ ನಡೆದಿದೆ.

ಮೃತ ವ್ಯಕ್ತಿ ವೇಣೂರು ಕರಿಮಣೇಲು ನರಂಗೆ ನಿವಾಸಿ ಸದಾನಂದ ಹೆಗ್ಡೆ(67)ಎಂದು ತಿಳಿದು ಬಂದಿದೆ. ಇವರು ವೃತ್ತಿಯಲ್ಲಿ ಕೃಷಿಕರು. ಕಾರ್ಕಳದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಲೆಂದು ಪತ್ನಿ ಜತೆ ಶನಿವಾರ ಮಧ್ಯಾಹ್ನ ಮೂಡುಬಿದಿರೆ ಬಸ್‍ನಿಲ್ದಾಣದಲ್ಲಿ  ಜೀವನ್ ಹೆಸರಿನ ಬಸ್ ಹತ್ತಿದ್ದರು. ಬಸ್ ಹೊರಡುವಷ್ಟರಲ್ಲಿ ಸದಾನಂದ ಅವರಿಗೆ ತೀವ್ರ ಎದೆನೋವು ಕಾಣಿಸಿ ಅಸ್ವಸ್ಥರಾದರೆನ್ನಲಾಗಿದೆ. ಸಮಸ್ಯೆಯ ಗಂಭೀರತೆಯನ್ನು ಅರಿತ ಬಸ್ ನಿರ್ವಾಹಕ ನವೀನ್ ಅವರು ಚಾಲಕ ವಿಜಯ್‍ಗೆ ವಿಷಯ ತಿಳಿಸಿದರು. ಚಾಲಕ ಕೂಡಲೇ ಬಸ್ಸನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಸದಾನಂದ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರಿಗೆ ಓರ್ವ ಪುತ್ರಿ ಇದ್ದಾರೆ. ಅವರು ತನ್ನ ಮಗಳ ಸೀಮಂತ ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಕಾರ್ಕಳಕ್ಕೆಂದು ಹೊರಟಿದ್ದರೆನ್ನಲಾಗಿದೆ. ಪ್ರಯಾಣಿಕನ ಜೀವ ಉಳಿಸಲು ಬಸ್ಸಿನ ನಿರ್ವಾಹಕ ಹಾಗೂ ಚಾಲಕ ತೋರಿದ ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Post a Comment

0 Comments