ಮಕ್ಕಳಿಗೆ ಹಿರಿಯರಿಂದ ಸಂಸ್ಕಾರ, ಸಂಸ್ಕೃತಿಯ ಪ್ರೇರಣೆ ಸಿಗಲಿ- ಶಕುಂತಳಾ ಶೆಟ್ಟಿ
ಮೂಡುಬಿದಿರೆ: ಮಕ್ಕಳು ಧೈರ್ಯದಿಂದ ಮುನ್ನಡೆಯಲು ನಮ್ಮ ಹಿಂದಿನ ತಲೆಮಾರಿನವರ ಬಳವಳಿಯಾಗಿರುವ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಲು ಹಿರಿಯರು ಪ್ರೇರಣೆ ನೀಡಬೇಕು
ಎಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಬಂಟರ ಸಂಘ ಮೂಡುಬಿದಿರೆ ಇದರ ಬಂಟರ ಮಹಿಳಾ ಘಟಕದ ವತಿಯಿಂದ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್‌ನ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಆಟಿಡೊಂಜಿ ದಿನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಸನ್ಮಾನ, ಸಹಾಯಧನ ವಿತರಣೆ, ಅಡುಗೆ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಷಾಢ ಮಾಸದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ನಮ್ಮ ಹಿರಿಯರು ಆಟಿ ತಿಂಗಳ ವಿಶಿಷ್ಟ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರಲಿಲ್ಲ. ಆ ಕಾಲದ ಬಡತನದ ಹಸಿವನ್ನು ನೀಗಿಸಿಕೊಳ್ಳಲು ಉಪ್ಪು ನೀರಿನಲ್ಲಿ ಮಳೆಗಾಲದ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿಟ್ಟುಕೊಂಡು ಸೇವಿಸುತ್ತಿದ್ದರು.ಕಾಡಿನ ವಿವಿಧ ಚಿಗುರುಗಳನ್ನು ಬಳಸಿಕೊಂಡು ಚಟ್ನಿ ತಯಾರಿಸಿ ಸೇವಿಸುತ್ತಿದ್ದರು.
ಇಂತಹ ಆಹಾರ ಪದಾರ್ಥಗಳಲ್ಲಿದ್ದ ಔಷಧೀಯ ಗುಣಗಳನ್ನು ಕಂಡುಕೊಂಡರು . ಮಕ್ಕಳು ಸಾಧಕರ ಹಾದಿಯಲ್ಲಿ ಸಾಗಬೇಕಾದರೆ ಅವರು ತಪ್ಪು ಮಾಡಿದಾಗ ಸರಿಯಾದ ದಾರಿಯಲ್ಲಿ ಸಾಗಲು ಸೂಕ್ತ ಮಾರ್ಗದರ್ಶನ ಹೆತ್ತವರಿಂದ ಮಕ್ಕಳಿಗೆ ಸಿಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು 2000 ವರ್ಷಗಳ ಇತಿಹಾಸವನ್ನು ಅರ್ಥೈಸಿಕೊಂಡು ಧರ್ಮವನ್ನು ಮುಂದಿಟ್ಟುಕೊಂಡು ಬದುಕಬೇಕು. ಮಹಿಳೆಯರ ಬಗ್ಗೆ ವಿಶೇಷ ಗೌರವವನ್ನು ಉಳಿಸಿಕೊಳ್ಳುತ್ತಾ ನಮ್ಮೊಳಗಿನ ಅಂತರ ಕಂದಕಗಳನ್ನು ಮರೆತು ಇಂತಹ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಾ ಇಂತಹ ಆಹಾರ ಪದ್ಧತಿ, ಆಚಾರ ವಿಚಾರಗಳು, ಕಲೆ, ಸಂಸ್ಕೃತಿ ಒಂದು ದಿನಕ್ಕೆ ಮಾತ್ರ ಸೀಮಿತವಾಗದಂತೆ ಜಾಗೃತ ವಹಿಸಬೇಕು ಎಂದು ನುಡಿದರು.
ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆಯವರ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ,ಲಯನ್ಸ್ ಜಿಲ್ಲೆ 317ಡಿಯ ಪೂರ್ವ ರಾಜ್ಯಪಾಲ ಸಂಜೀತ್ ಶೆಟ್ಟಿ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಮಾತನಾಡಿದರು.
ಬಂಟರ ಮಹಿಳಾ ಘಟಕದ ಗೌರವಾಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಮಿಜಾರುಗುತ್ತು ಮೀನಾಕ್ಷಿ ಆಳ್ವ, ತೋಡಾರು ದಿವಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಗೀತಾ ಪಿ. ಶೆಟ್ಟಿ, ಘಟಕದ ಕಾರ್ಯದರ್ಶಿ ಸೌಮ್ಯಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ಸಾಧಕಿಯರಾದ ಡಾ. ವನಿತಾ ಶೆಟ್ಟಿ ಮತ್ತು ಪ್ರತಿಭಾ ಎಸ್. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಮಾರ್ಪಾಡಿಯ ಯಶೋದಾ ಶೇಖರ ಶೆಟ್ಟಿಯವರಿಗೆ ಸಹಾಯಧನ ವಿತರಿಸಲಾಯಿತು.
ವಿಜ್ಞಾನ ಮಾಡೆಲ್ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿರುವ ರಾಹುಲ್ ಪಿ. ಹೆಗ್ಡೆ ಕಣಜಾರು ಮತ್ತು ಕ್ರೀಡಾ ಕ್ಷೇತ್ರದ ಸಾಧಕಿ ನಿದಿಶಾ ಶೆಟ್ಟಿ ಇರುವೈಲು ಅವರನ್ನು ಹಾಗೂ
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 6 ಮಂದಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತೇಜಸ್ ಶೆಟ್ಟಿಯವರನ್ನು ಉಚಿತ ಡ್ರೈವಿಂಗ್ ಶಿಕ್ಷಣ ಪಡೆಯಲು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳು ಮತ್ತು ಅಡುಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದ ಘಟಕದ ಸದಸ್ಯೆಯರು ಮೆಚ್ಚುಗೆ ಪಡೆದರು.
ಪ್ರಫುಲ್ಲಾ ಎಂ. ಶೆಟ್ಟಿ ಸ್ವಾಗತಿಸಿದರು. ಪ್ರಾಪ್ತಿ ಆರ್. ಶೆಟ್ಟಿ ಪನರೊಟ್ಟು ಪ್ರಾರ್ಥಿಸಿದರು.
ಸೌಮ್ಯಾ ಎಸ್. ಶೆಟ್ಟಿ ವರದಿ ವಾಚಿಸಿದರು. ಪದ್ಮಾವತಿ ಶೆಟ್ಟಿ , ಚಂಚಲಾ ಶೆಟ್ಟಿ, ಸನ್ಮಾನಿತರನ್ನು ಪರಿಚಯಿಸಿದರು. ಅಕ್ಷತಾ ಶೆಟ್ಟಿ ಇರುವೈಲು ಮತ್ತು ರೋಹಿಣಿ ಶೆಟ್ಟಿ ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ಸಂಗೀತಾ ಶೆಟ್ಟಿ ಸ್ಪರ್ಧಾ ವಿಜೇತರ ಪಟ್ಟಿ ಓದಿದರು.
ಅನಿತಾ ಎಸ್. ಶೆಟ್ಟಿ ಮುಖ್ಯ ಅತಿಥಿಯವರನ್ನು ಪರಿಚಯಿಸಿದರು. ಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರಿಣಾಕ್ಷಿ ಶೆಟ್ಟಿ ವಂದಿಸಿದರು.
0 Comments