ಗ್ರಾಮಸ್ಥರಿಂದ ತಾತ್ಕಾಲಿಕ ಕಿಂಡಿ ಅಣೆಕಟ್ಟು ನಿರ್ಮಾಣ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮಸ್ಥರಿಂದ ತಾತ್ಕಾಲಿಕ ಕಿಂಡಿ ಅಣೆಕಟ್ಟು ನಿರ್ಮಾಣ


ಮೂಡುಬಿದಿರೆ: ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಚ್ಚಮೊಗರು ಗ್ರಾಮದ ತಾಕೊಡೆಯಲ್ಲಿ ಗ್ರಾಮಸ್ಥರು ತಾತ್ಕಾಲಿಕ ಕಿಂಡಿ ಅಣೆಕಟ್ಟನ್ನು ನಿರ್ಮಿಸಿ ಸಾರ್ವಜನಿಕರ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.


 ತಾಕೊಡೆಯ ಅಮ್ಮಿ ಕೋಟ್ಯಾನ್ ಮನೆ ಬಳಿಯ ತೋಟದಿಂದ ಹಾದು ಹೋಗಲು ನಿರ್ಮಿಸಿದ್ದ  ಕಿಂಡಿ ಅಣೆಕಟ್ಟು ಅಪಾಯದ ಸ್ಥಿತಿಯಲಿದ್ದು ಸಂಚಾರಕ್ಕೆ ತಡೆ ಮಾಡಲಾಗಿತ್ತು ಇದರಿಂದಾಗಿ ಸ್ಥಳೀಯರು ಸುತ್ತು ಬಳಸಿ ಹೋಗಬೇಕಾಗಿತ್ತು.


  ಇದನ್ನರಿತ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಸದಾಶಿವ, ಪಿಡಿಓ ಶೇಖರ್ ಅವರ ಮುಂದಾಳುತ್ವದಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲು ಯೋಚಿಸಿದ್ದರು. 

ಅದರಂತೆ ಪಂಚಾಯತ್ ಉಪಾಧ್ಯಕ್ಷ ರೆಕ್ಸಾನ್, ಸದಸ್ಯರು ರುಕಿಯಾ ಸಹಿತ ಸದಸ್ಯರು ಮತ್ತು ಗ್ರಾಮಸ್ಥರ ನೆರವಿನಿಂದ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗಿದೆ.

Post a Comment

0 Comments