ಈಕೋ- ಮ್ಯಾಸ್ಟ್ರೋ ಢಿಕ್ಕಿ: ಮರಿಯಾಡಿ ನಿವಾಸಿ ಮೃತ್ಯು

ಜಾಹೀರಾತು/Advertisment
ಜಾಹೀರಾತು/Advertisment

 ಈಕೋ- ಮ್ಯಾಸ್ಟ್ರೋ ಢಿಕ್ಕಿ: ಮರಿಯಾಡಿ ನಿವಾಸಿ ಮೃತ್ಯು

ಮೂಡುಬಿದಿರೆ: ತಾಲೂಕಿನ  ಕೋಟೆಬಾಗಿಲು ಬಳಿ ಸೋಮವಾರ ಮಧ್ಯಾಹ್ನ  ಈಕೋ-ಮ್ಯಾಸ್ಟ್ರೋ ಢಿಕ್ಕಿಯಾಗಿ ಮರಿಯಾಡಿಯ ನಿವಾಸಿ ಅಹಮದ್ ಬಾವ (50) ಅವರು ಮೃತಪಟ್ಟಿದ್ದಾರೆ.


   ಮೂಡುಬಿದಿರೆ ಕಡೆಗೆ ಬರುತ್ತಿದ್ದ ಈಕೋ ಕಾರು ಮೂಡುಬಿದಿರೆಯಿಂದ ಮರಿಯಾಡಿ ಕಡೆಗೆ ಹೋಗುತ್ತಿದ್ದ ಮ್ಯಾಸ್ಟ್ರೊ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಮ್ಯಾಸ್ಟ್ರೋ ಸವಾರ ಅಹಮದ್ ಬಾವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆವೇಳೆ ಮೃತಪಟ್ಟಿದ್ದಾರೆ.

  ವೃತ್ತಿಯಲ್ಲಿ ಮೇಸ್ತ್ರಿ ಕೆಲಸ, ಕೂಲಿ ಕೆಲಸ ಮಾಡಿಕೊಂಡಿದ್ದ ಅಹಮದ್ ಬಾವ ಬಡ ಕುಟುಂಬದವರಾಗಿದ್ದು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

Post a Comment

0 Comments