ಸಂಪಿಗೆ ಚಚ್ ೯ನಲ್ಲಿ "ಯುವ ಮಿಲನ್"

ಜಾಹೀರಾತು/Advertisment
ಜಾಹೀರಾತು/Advertisment

 ಸಂಪಿಗೆ ಚಚ್ ೯ನಲ್ಲಿ "ಯುವ ಮಿಲನ್"


ಮೂಡುಬಿದಿರೆ: ಯುವ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪವಿತ್ರಾತ್ಮರ ದೇವಾಲಯ ಸಂಪಿಗೆ ಮತ್ತು ಐ.ಸಿ.ವೈ.ಎಮ್. ಸಂಪಿಗೆ ಘಟಕ ಇದರ ಸಹಯೋಗದೊಂದಿಗೆ  *"ಸಂಪಿಗೆ ಯುವ ಮಿಲನ್ 2024"ನ್ನು  ಸಂಪಿಗೆ ಸಭಾ ಭವನದಲ್ಲಿ ಆಯೋಜಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಐ.ಸಿ.ವೈ.ಎಮ್. ಕೇಂದ್ರೀಯ ಸಮಿತಿಯ ನಿರ್ದೇಶಕ  ಫಾದರ್. ಅಶ್ವಿನ್ ಕಾರ್ಡೋಜಾ, ಸಂಪಿಗೆ ಚರ್ಚ್'ನ ಧರ್ಮ ಗುರು ವಂ. ವಿನ್ಸೆಂಟ್ ಡಿಸೋಜಾ, ಐ.ಸಿ.ವೈ.ಎಮ್. ಕೇಂದ್ರೀಯ ಸಮಿತಿಯ ಕೋಶಾಧಿಕಾರಿ ರೀನಾ ಕ್ರಾಸ್ತಾ, ಐ.ಸಿ.ವೈ.ಎಮ್. ಮೂಡುಬಿದಿರೆ ವಲಯದ ಅಧ್ಯಕ್ಷ ಜೆವಿನ್ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಫ್ರೇಡ್ ಮಿಸ್ಕಿತ್, ಕಾರ್ಯದರ್ಶಿ ರೋಶನ್ ಫೆರ್ನಾಂಡಿಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಅಧ್ಯಕ್ಷ ಮೆಲ್ರೋಯ್ ಮೋರಾಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಸಚೇತಕ ವಿಪಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಐ.ಸಿ.ವೈ.ಎಮ್. ಸಂಪಿಗೆ ಘಟಕದ ಉಪಾಧ್ಯಕ್ಷೆ ಜೋಯ್ಲಿನ್ ಕೊರ್ಡೆರೋ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಐ.ಸಿ.ವೈ.ಎಮ್. ಸಂಪಿಗೆ ಘಟಕದ ಸಾಂಸ್ಕ್ರತಿಕ ಕಾರ್ಯದರ್ಶಿ ನೀಶಲ್ ಡಿಸಿಲ್ವ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

50 ಕ್ಕೂ ಹೆಚ್ಚು ಉತ್ಸಾಹಿ ಯುವಜನರನ್ನು ಸೆಳೆಯುವ ಮೂಲಕ *"ಸಂಪಿಗೆ ಯುವ ಮಿಲನ್ 2024"* ಯಶಸ್ವಿಯಾಗಿ ಮುಕ್ತಾಯವಾಯಿತು.

Post a Comment

0 Comments