ಮಾರೂರಿನಲ್ಲಿ ಮನೆಗಳು ಕುಸಿತ: ಶಾಸಕ ಕೋಟ್ಯಾನ್ ಭೇಟಿ
ಮೂಡುಬಿದಿರೆ ತಾಲೂಕಿನ ಮಾರೂರು ಹೊಸಂಗಡಿ ಹೆಚ್. ಅಬ್ದುಲ್ ಖಾದರ್ ಮತ್ತು ಹತೀಜಮ್ಮ ರವರ ಮನೆಗಳು ಮಳೆಯ ತೀವ್ರತೆಗೆ ಕುಸಿದು ಹಾನಿ ಸಂಭವಿಸಿದೆ.
2 ಮನೆಗಳು ಜಖಂಗೊಂಡಿದ್ದು ಘಟನಾ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದ್ದಾರೆ.
ಸ್ಥಳೀಯ ಶಾಹೀರಬ್ಬ ಅವರ ಮನೆ ಕಂಪೌಂಡ್ ಉರುಳಿ ಬಿದ್ದಿದೆ. ಸ್ಥಳೀಯ ಸುಬ್ರಹ್ಮಣ್ಯ ಭಟ್, ಗೋಪಾಲಕೃಷ್ಣ ದೇವಸ್ಥಾನದ ವೆಂಕಟರಾಜ ಅಸ್ರಣ್ಣ ಹಾಗೂ ಸುತ್ತಮುತ್ತಲ ಸುಮಾರು 25 ಮನೆಗಳಿಗೆ ನೆರೆ ನೀರು ನುಗ್ಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾನಿಗೊಂಡಿವೆ. ಮನೆಯ ಪೀಠೋಪಕರಣಗಳು ಮತ್ತಿತರ ಸರಂಜಾಮುಗಳು ನೀರಿನಲ್ಲಿ ತೇಲುವ ದೃಶ್ಯ ಕಂಡುಬಂದಿತ್ತು.
ಸುಮಾರು 1972ರಲ್ಲಿ ಈ ರೀತಿಯ ನೆರೆ ಹಾವಳಿ ಉಂಟಾಗಿರುವುದಾಗಿ ಸುಬ್ರಹ್ಮಣ್ಯ ಭಟ್‌ರವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೋಟ್ಯಾನ್‌ರವರು ಸಂತೃಸ್ತ ಮನೆಯವರಿಗೆ ಸರಕಾರದಿಂದ ಅನುದಾನ ಒದಗಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಕರಣೀಕರಾದ ಭವ್ಯ, ಪುರಸಭಾ ಸದಸ್ಯೆ ಕುಶಲಾ, ಯಶೋಧರ ದೇವಾಡಿಗ, ಪುರುಷೋತ್ತಮ, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.
0 Comments