ಕಲ್ಲಮುಂಡ್ಕೂರು: ಜೆ.ಸಿ.ಐ ನಿಂದ ಎಂಪವರಿಂಗ್ ತರಬೇತಿ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಮುಂಡ್ಕೂರು: ಜೆ.ಸಿ.ಐ ನಿಂದ ಎಂಪವರಿಂಗ್ ತರಬೇತಿ

ಮೂಡುಬಿದಿರೆ: ಜೆ ಸಿ ಐ ಮೂಡುಬಿದಿರೆ ತ್ರಿಭುವನ್ ವತಿಯಿಂದ ಎಂಪವರಿಂಗ್ ಯೂಥ್ ತರಬೇತಿಯು ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರಿನಲ್ಲಿ ನಡೆಯಿತು. 

 ಶಾಲಾ ಸಮಿತಿಯ ಸಂಚಾಲಕ ಎಂ. ಜಯಪ್ರಕಾಶ್ ಪಡಿವಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಸ್ತು ಹಾಗೂ ನಡವಳಿಕೆ  ಬೆಳಿಸಿಕೊಳ್ಳಬೇಕು ಎಂದರು.

ಜೆಸಿಐ ಮೂಡುಬಿದಿರೆ ತ್ರಿಭುವನ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದರು.

ವಲಯ ತರಬೇತುದಾರ ಅಜಿತ್ ಪ್ರಸಾದ್ ಹೆಚ್.ಪಿ ಅವರು ವಿಭಿನ್ನ ವಾಗಿ ಆಲೋಚಿಸು ಎಂಬ ಪರಿಕಲ್ಪನೆ ಹಿನ್ನಲೆಯಲ್ಲಿ ಹೊಸಬಗೆಯ ಚಿಂತನೆಗಳನ್ನು ಪ್ರಚೋದಿಸುವ ರೀತಿಯಲ್ಲಿ ಆಟಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಮುಖ್ಯ ಶಿಕ್ಷಕ  ಸದಾನಂದ, ಜೆಸಿ ನವೀನ್ ಟಿ. ರ್, ಉಪಸ್ಥಿತರಿದ್ದರು.

 45 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

Post a Comment

0 Comments