ಸನಾತನ ಧರ್ಮದಲ್ಲಿ ನಾಗರಪಂಚಮಿ ಪ್ರಾಣಿಮಾತ್ರರಲ್ಲಿ ಈಶ್ವರನನ್ನು ನೋಡಲು ಕಲಿಸುವ ಹಬ್ಬ

ಜಾಹೀರಾತು/Advertisment
ಜಾಹೀರಾತು/Advertisment

 ಸನಾತನ ಧರ್ಮದಲ್ಲಿ ನಾಗರಪಂಚಮಿ

ಪ್ರಾಣಿಮಾತ್ರರಲ್ಲಿ ಈಶ್ವರನನ್ನು ನೋಡಲು ಕಲಿಸುವ ಹಬ್ಬ

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ ನಾಗರಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು (2024 ರಲ್ಲಿ ಆಗಸ್ಟ್ 9, ಶುಕ್ರವಾರ) ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವರನ್ನು ಪೂಜಿಸಿ, ನಾಗ ದೇವರಿಗೆ ಹಾಲಿನ ನೈವೇದ್ಯವನ್ನು ಅರ್ಪಿಸುತ್ತಾರೆ. ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ ಎಂದು ಭಕ್ತರ ಬಲವಾದ ನಂಬಿಕೆಯಿದೆ.


“ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ” ಎಂಬ ಶ್ಲೋಕವು ನಾಗ ದೇವನ ವಿವಿಧ ಹೆಸರುಗಳನ್ನು ಹೇಳುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆ ಮಾಡಲಾಗುತ್ತದೆ. ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಹಲವು ಕಡೆ ನಾಗನ ಕಲ್ಲುಗಳಿಗೆ ಕ್ಷೀರಾಭಿಷೇಕ ಮಾಡುವ ಪದ್ಧತಿಯಿದೆ.


‘ನಮ್ಮ ಕುಟುಂಬವು ಸದಾಸರ್ವಕಾಲ ನಾಗಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿ ಅಂದರೆ ನಾಗರಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ. ಈ ದಿನದಂದು ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗನನ್ನು ತಂದು ಅದರ ಪೂಜೆಯನ್ನು ಮಾಡುತ್ತಿದ್ದರೆ, ಕೆಲವು ಸ್ಥಳದಲ್ಲಿ ಹುತ್ತದ ಪೂಜೆಯನ್ನು, ನಾಗದೇವತೆಯ ಕಲ್ಲಿನ ಪ್ರತಿಮೆಯ ಪೂಜೆಯನ್ನೂ ಮಾಡಲಾಗುತ್ತದೆ.



ನಾಗ ಪೂಜೆಯ ಮಹತ್ವ


ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು, ಎಂದು ಗೀತೆಯಲ್ಲಿ (10.29) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.



ಅನನ್ತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಮ್ಬಲಮ್ ।

ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ ।।



ಅರ್ಥ: ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಬತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.


ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಎಂಬುದೇ ಕಲಿಕೆಯಿರುತ್ತದೆ. – ಪರಾತ್ಪರ ಗುರು ಪರಶರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ

ನಾಗರಪಂಚಮಿಯ ದಿನವನ್ನು ಬಿಟ್ಟು ಇತರ ದಿನಗಳಲ್ಲಿ ನಾಗಗಳಲ್ಲಿ ತತ್ತ್ವಗಳು ಅಪ್ರಕಟವಾಗಿರುತ್ತವೆ. ನಾಗರಪಂಚಮಿಯಂದು ತತ್ತ್ವಗಳು ಪ್ರಕಟ ರೂಪದಲ್ಲಿ ಕಾರ್ಯನಿರತವಾಗುವುದರಿಂದ ಪೂಜಕನಿಗೆ ಲಾಭವಾಗುತ್ತದೆ.

ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ ರೂಪದಲ್ಲಿರುವ ಶಿವನ ಪೂಜೆಯೇ. ಆದುದರಿಂದ ಆ ದಿನ ವಾತಾವರಣದಲ್ಲಿರುವ ಶಿವ-ಲಹರಿಗಳು ಆಕರ್ಶಿತಗೊಂಡು ಆ ಜೀವಕ್ಕೆ ಇತರ 365 ದಿನಗಳ ಕಾಲ ಉಪಯುಕ್ತವಾಗುತ್ತವೆ. ಸ್ತ್ರೀಯರು ನಾಗ ದೇವರಿಗೆ ಪೂಜೆ ಸಲ್ಲಿಸುವುದರಿಂದ ಅವರಿಗೆ ಶಕ್ತಿ ತತ್ತ್ವ ಪ್ರಾಪ್ತವಾಗುತ್ತದೆ.


ನಾಗರಪಂಚಮಿಯಂದು ನಾಗಗಳಿರುವ ಹುತ್ತಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಹುತ್ತದಲ್ಲಿ ನಾಗನ ವಾಸವಿರುವುದರಿಂದ ಅಲ್ಲಿಯ ವಾತಾವರಣದಲ್ಲಿಯೂ ಅದರ ಸೂಕ್ಷ್ಮ ಪರಿಣಾಮವಾಗುತ್ತದೆ.


ನಾಗರಪಂಚಮಿ : ಇತಿಹಾಸ


ಸರ್ಪಯಜ್ಞದ ಸಮಾಪ್ತಿಯ ದಿನ : ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.


ಕಾಲಿಯಾಮರ್ದನದ ತಿಥಿ : ಭಗವಾನ ಶ್ರೀಕೃಷ್ಣನು ಗೋಕುಲದಲ್ಲಿರುವಾಗ ಶ್ರಾವಣ ಶುಕ್ಲ ಪಕ್ಷ ಪಂಚಮಿಯ ದಿನದಂದು ಯಮುನಾ ನದಿಯಲ್ಲಿದ್ದ ಕಾಲಿಯಾ ಎಂಬ ನಾಗನ ಮರ್ದನವನ್ನು ಮಾಡಿದನು. ಶ್ರೀಕೃಷ್ಣನು ಕಾಳಿಯಾ ನಾಗನನ್ನು ಮರ್ದನ ಮಾಡಿದ ದಿವಸದಂದು ನಾಗರಪಂಚಮಿ ಮಾಡಲಾಗುತ್ತದೆ.



ನಾಗರ ಪಂಚಮಿಯ ದಿನ ನಿಷಿದ್ಧ ಕೃತಿಗಳು

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ. ಆದರೆ ವರ್ಷವಿಡೀ ಈ ಕೃತಿಗಳನ್ನು ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾದರೆ ನಾಗರಪಂಚಮಿಯಂದು ಈ ಕೃತಿಗಳನ್ನು ನಿಷೇಧಿಸಿರುವ ಕಾರಣ ಮತ್ತು ಅವುಗಳನ್ನು ಮಾಡುವುದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳೋಣ.


ನಾಗದೇವತೆಯು ಇಚ್ಛೆಯ ಪ್ರತೀಕ. ಇಚ್ಛೆಯ ಪ್ರವರ್ತಕ (ಅಂದರೆ ಇಚ್ಛೆಗೆ ವೇಗ ನೀಡುವ) ಮತ್ತು ಸಕಾಮ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಯೂ ಹೌದು. ನಾಗದೇವರು ಇಚ್ಛೆಗೆ ಸಂಬಂಧಿಸಿದ ಕನಿಷ್ಠ ದೇವತೆಯಾಗಿದ್ದಾರೆ. ನಾಗರಪಂಚಮಿಯಂದು ಸಂಬಂಧಸಿದ ತತ್ತ್ವದ ದೇವತೆಗಳಿಂದ ನಿರ್ಮಾಣವಾಗುವ ಇಚ್ಛಾ ಲಹರಿಗಳು ಭೂಮಿಯ ಮೇಲೆ ಅವತರಿಸುವುದರಿಂದ ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ. ಈ ದಿನದಂದು ಭೂಮಿಯಲ್ಲಿರುವ ಇಚ್ಛಾಜನ್ಯ ದೇವತಾಸ್ವರೂಪ ಲಹರಿಗಳು ಘನವಾಗುವ ಪ್ರಮಾಣವೂ ಹೆಚ್ಚಿರುತ್ತದೆ. ಹೆಚ್ಚುವುದು, ಕೊಯ್ಯುವುದು, ಭೂಮಿ ಉಳುವುದು ಮುಂತಾದ ಕೃತಿಗಳಿಂದ ರಜ-ತಮಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು (ಅಂದರೆ ದೇವತಾಜನ್ಯ ಇಚ್ಛಾಲಹರಿಗಳ ಕಾರ್ಯವನ್ನು ವಿರೋಧಿಸುವ ಲಹರಿಗಳು) ವಾಯುಮಂಡಲದಲ್ಲಿ ಹೊರಸೂಸುವ ಪ್ರಮಾಣವು ಹೆಚ್ಚಾಗುವುದರಿಂದ ಈ ದಿನದಂದು ನಾಗದೇವತೆಯ ಲಹರಿಗಳಿಗೆ ತಮ್ಮ ಕಾರ್ಯ ಮಾಡುವಲ್ಲಿ ಅಡಚಣೆಗಳು ಬರಬಹುದು. ಈ ಕಾರಣದಿಂದ ನಾಗರಪಂಚಮಿಯಂದು ಹೆಚ್ಚುವುದು, ಕರಿಯುವುದು, ಉಳುಮೆ, ಹೊಲಿಗೆ ಮುಂತಾದ ಕೃತಿಗಳನ್ನು ಮಾಡುವುದರಿಂದ ಪಾಪ ತಗಲಬಹುದು.


ನಾಗರಪಂಚಮಿಯ ತುಲನೆಯಲ್ಲಿ ಇತರ ದಿನಗಳಂದು ಇಂತಹ ದೇವತಾಜನ್ಯ ಇಚ್ಛಾಲಹರಿಗಳು ಭೂಮಿಯತ್ತ ಬಾರದಿರುವುದರಿಂದ ಇಂತಹ ಕೃತಿಗಳನ್ನು ಮಾಡುವುದರಿಂದ ಸಮಷ್ಟಿ ಪಾಪ ತಗಲುವ ಪ್ರಮಾಣವೂ ಕಡಿಮೆಯಿರುತ್ತದೆ. ಈ ಕಾರಣದಿಂದಲೇ ಆಯಾ ದಿನದಂದು ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಕ್ಕನುಗುಣವಾಗಿ ಆಯಾ ದಿನದಂದು ಆ ದೇವತೆಯ ಉತ್ಸವ ಅಥವಾ ಹಬ್ಬವನ್ನು ಆಚರಿಸಲು ಹಿಂದೂ ಧರ್ಮವು ಕಲಿಸುತ್ತದೆ.


ಹಿಂದಿನ ಕಾಲದಲ್ಲಿ ಗೆಡ್ಡೆ-ಗೆಣಸು ಹುರಿದು, ಅಥವಾ ಬೇಯಿಸಿ ತಿನ್ನುವ ರೂಢಿಯಿತ್ತು. ಇದರಲ್ಲಿ ಹೆಚ್ಚುವ, ಕೊಯ್ಯುವ ಮತ್ತು ಕರಿಯುವ ಕೃತಿಗಳು ಇರುತ್ತಿರಲಿಲ್ಲ. ಆದುದರಿಂದ ಪಾಪ ತಗಲುವ ಪ್ರಮಾಣವೂ ಕಡಿಮೆಯಿತ್ತು.ಕಲಿಯುಗದಲ್ಲಿ ಹಿಂದಿನ ಕಾಲದ ಪರಂಪರೆಗಳನ್ನು ಪಾಲಿಸುವುದು ಕಠಿಣವಾಗಿರುವುದರಿಂದ ಪ್ರತಿಯೊಂದು ಕೃತಿಯಿಂದ ನಿರ್ಮಾಣವಾಗುವ ಪಾಪವು ನಷ್ಟ ಮಾಡಲು ಆ ಕೃತಿಯನ್ನು ಸಾಧನೆಯ ರೂಪದಲ್ಲಿ ಅಂದರೆ ನಾಮಜಪದೊಂದಿಗೆ ಮಾಡುವುದು ಆವಶ್ಯಕವಾಗಿದೆ.


ಆಧಾರ ಗ್ರಂಥ : ಸನಾತನ ಸಂಸ್ಥೆಯ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’


Post a Comment

0 Comments