ತೋಡಿನಲ್ಲಿ ಸತ್ತುಬಿದ್ದಿದ್ದ ದನಕ್ಕೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಯುವಕರು

ಜಾಹೀರಾತು/Advertisment
ಜಾಹೀರಾತು/Advertisment

 ತೋಡಿನಲ್ಲಿ ಸತ್ತುಬಿದ್ದಿದ್ದ ದನಕ್ಕೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಯುವಕರು

ಮೂಡುಬಿದಿರೆ:   ತೋಡೊಂದರಲ್ಲಿ  ಸತ್ತುಬಿದ್ದು ದುರ್ನಾತ ಬೀರುತ್ತಿದ್ದ ದನವೊಂದರ ಕಳೇಬರವನ್ನು ಯುವಕರು  ಮೇಲಕ್ಕೆತ್ತಿ ಅದರ ಅಂತ್ಯಸಂಸ್ಕಾರವನ್ನು ಮಾಡಿದ ಘಟನೆ ಕೆಲ್ಲಪುತ್ತಿಗೆಯಲ್ಲಿ ನಡೆದಿದೆ.

 ಮೇಯಲು ಬಿಟ್ಟಿದ್ದ ಆ ದನವು ಇತ್ತೀಚಿನ ಜೋರಾದ ಮಳೆಗೆ ತೋಡಿನಲ್ಲಿ ಕೊಚ್ಚಿಕೊಂಡು ಹೋಗಿ ಕೆಲ್ಲಪುತ್ತಿಗೆಯ ತೋಡಿನಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾಗದೆ ಅಲ್ಲೇ ಕೊನೆಯುಸಿರೆಳೆದಿತ್ತು. ಪ್ರಾಣ ಕಳೆದುಕೊಂಡು ಕೆಲವು ದಿನಗಳಾಗಿದ್ದರಿಂದ ದುರ್ನಾತ ಬೀರುತಿದ್ದದರಿಂದ  ಯಾರೂ ಅದರ ಬಳಿ ಹೋಗಿರಲಿಲ್ಲ. ಮತ್ತು ಯಾರು ಕೂಡಾ ಅದನ್ನು ಮೇಲಕ್ಕೆತ್ತಿ ದಫನ ಮಾಡಲು ಹೋಗಿರಲಿಲ್ಲ.ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಹೋಗಿ " ಕೂಡಲೇ ವ್ಯವಸ್ಥೆ ಮಾಡಿ" ಎಂದು ಸೂಚಿಸಿದ್ದಲ್ಲದೆ ಅದನ್ನು ಮೇಲಕ್ಕೆತ್ತಿಸಿ ದಫನ ಮಾಡಿಸುವ ಕೆಲಸಕ್ಕೆ ಮುಂದಾಗಲಿಲ್ಲ.


  ಈ ವಿಚಾರವನ್ನು ದನದ ಮನೆಯವರ ಸಂಬಂಧಿಕ ಜಗ್ಗು ಎಂಬವರು ವಾಲ್ಪಾಡಿ ,ಮಕ್ಕಿಯ ಕೆಲ ಯುವಕರಲ್ಲಿ ತಿಳಿಸಿದಾಗ ಕೂಡಲೇ ಕಾರ್ಯಪ್ರವೃತ್ತರಾದ ಬಿ.ಕೆ.ರಝಾಕ್, ಮನ್ಸೂರ್, ಮುನ್ನ,ಇಕ್ಬಾಲ್, ಶಬೀರ್, ಶರಿಫಾಕ ವಾಲ್ಪಾಡಿ ಮುಂತಾದವರು ಕೆಲ್ಲಪುತ್ತಿಗೆಯ ಆ ತೋಡಿಗಿಳಿದು ದುರ್ನಾತ ಬೀರುತ್ತಿದ್ದ ದನವನ್ನು ಮೇಲಕ್ಕೆತ್ತಿ ಅದೇ ಪರಿಸರದಲ್ಲಿ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅವರಿಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದು ಯುವಕರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ದನದ ಮನೆಯವರು ಯುವಕರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Post a Comment

0 Comments