ಮೂಡುಬಿದಿರೆ : ಹಿಂದೂ ಸಂಗಮ ಆಯೋಜನಾ ಸಮಿತಿ ಮೂಡುಬಿದಿರೆ ತಾಲೂಕು ಇದರ ಶಿತಾ೯ಡಿ ಮಂಡಲದ ವಾಲ್ಪಾಡಿ, ಶಿತಾ೯ಡಿ, ಮೂಡುಕೊಣಾಜೆ ಗ್ರಾಮಗಳನ್ನೊಳಗೊಂಡ ಬೃಹತ್ ಹಿಂದೂ ಸಂಗಮದ ವೈಭವದ ಶೋಭಾಯಾತ್ರೆಯು ಶಿತಾ೯ಡಿಯಿಂದ ಅಜು೯ನಾಪುರ ದೇವಸ್ಥಾನದವರೆಗೆ ನಡೆಯಿತು.
ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಶಿತಾ೯ಡಿಯಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಗಳನ್ನು ಅಪಿ೯ಸಿ, ತೆಂಗಿನಕಾಯಿಯನ್ನು ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆಯನ್ನು ನೀಡಿದರು.
ಅಜಿತ್ ಜೈನ್, ನಯನ್ ವಮಾ೯, ಅಣ್ಣಿ ಪೂಜಾರಿ, ನಿರಂಜನ್ ಜೈನ್, ಟಿ. ಕೆ. ವೆಂಕಟರಾವ್, ತಾಲೂಕಿನ ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಯೋಜಕರಾದ ಮಂಜುನಾಥ ಶೆಟ್ಟಿ, ಶಿತಾ೯ಡಿ ಮಂಡಲದ ಪ್ರಮುಖರಾದ ಸುಕೇಶ್ ಶೆಟ್ಟಿ ಎದಮಾರು, ಹರೀಶ್ಚಂದ್ರ ಕೆ. ಸಿ, ಲಕ್ಷ್ಮಣ್ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್ ಹನ್ನೇರು, ಸತೀಶ್ ಶೆಟ್ಟಿ ಶ್ರೀ ಬ್ರಹ್ಮ, ಪದ್ಮನಾಭ ಕೋಟ್ಯಾನ್,ಲತಾ ಹೆಗ್ಡೆ, ಅಕ್ಷಯ ಕುಮಾರ್, ಗಣೇಶ್ ಬಿ. ಅಳಿಯೂರು, ಪ್ರವೀಣ್ ಕುಮಾರ್, ಅಭಿಲಾಷ್ ಅಜು೯ನಾಪುರ, ಪ್ರವೀಣ್ ಕುಮಾರ್ ಅಜು೯ನಾಪುರ ಉಪಸ್ಥಿತರಿದ್ದರು.
ಶೋಭಾಯಾತ್ರೆಯಲ್ಲಿ ಪೂಣ೯ಕುಂಭ ಹಿಡಿದ ಮಹಿಳೆಯರು, ಕುಣಿತ ಭಜನಾ ತಂಡಗಳು, ಗೊಂಬೆ ಬಳಗ, ಹನುಮಂತ ವೇಷಧಾರಿ, ಯಕ್ಷಗಾನ ವೇಷಗಳು ಭಾಗವಹಿಸಿ ಮೆರುಗನ್ನು ನೀಡಿದವು.


0 Comments