ಮಹಿಳೆಯ ಸಂಶಯಾಸ್ಪದ ಸಾವು...?

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಮಹಿಳೆಯ ಸಂಶಯಾಸ್ಪದ ಸಾವು...?



ಮೂಡುಬಿದಿರೆ : ತಲೆಗೆ ಏಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋವ೯ರು ಮಂಗಳವಾರ ರಾತ್ರಿ ಮೃತಪಟ್ಟಿದ್ದು ಇದು ಸಂಶಯಾಸ್ಪದ ಸಾವು ಎಂದು ಸಂಬಂಧಿಕರು ಮಾತನಾಡಿಕೊಳ್ಳುತ್ತಿದ್ದಾರೆ.

 ವಿದ್ಯಾಗಿರಿಯ ನಿವಾಸಿ ದಿನೇಶ್ ಎಂಬವರ ಪತ್ನಿ ಸವಿತಾ ಮೃತಪಟ್ಟ ಮಹಿಳೆ.

 ಕವಿತಾ ಅವರು ಎರಡು ದಿನಗಳ ಹಿಂದೆ ತಲೆಗೆ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. 


  ಆಕೆಯ ಗಂಡ ದಿನೇಶ್ ಪ್ರತಿದಿನ ಆಕೆಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಇದೀಗ ಕೂಡಾ ಈ ಸ್ಥಿತಿಗೆ ಆತನೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. 


 ಆದರೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ಬಿದ್ದು ಗಂಭೀರ ಗಾಯಗೊಂಡಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. 

 ದಿನೇಶ್ ಅವರು ಲ್ಯಾಂಡ್ ವ್ಯವಹಾರ ನಡೆಸುತ್ತಿದ್ದಾರೆ. ಕವಿತಾ ಅವರ ತಾಯಿ ಕೂಡಾ ಇವರ ಜತೆಯಲ್ಲೇ ಇದ್ದು ಎರಡು ವಷ೯ಗಳ ಹಿಂದೆ ಮೃತಪಟ್ಟಿದ್ದರು.

 ಒಟ್ಟಾರೆಯಾಗಿ ಈ ಸಾವಿನ ಬಗ್ಗೆ ಕವಿತಾ ಅವರ ಸಂಬಂಧಿಕರು ಮತ್ತು ಮನೆಯ ಸಮೀಪದವರು ಸಂಶಯ ವ್ಯಕ್ತ ಪಡಿಸಿದ್ದಾರೆ.

Post a Comment

0 Comments

Advertisement