ಮೂಡುಮಾರ್ನಾಡು : ಶಾಲಾ ವಿದ್ಯಾರ್ಥಿಗಳಿಗೆ ಸ್ಯಾಂಡಲ್ಸ್ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಮಾರ್ನಾಡು : ಶಾಲಾ ವಿದ್ಯಾರ್ಥಿಗಳಿಗೆ ಸ್ಯಾಂಡಲ್ಸ್ ವಿತರಣೆ

ಮೂಡುಬಿದಿರೆ: ಸರ್ಕಾರಿ ಪ್ರೌಢಶಾಲೆ ಮೂಡು ಮಾರ್ನಾಡು ಇಲ್ಲಿನ ಹೈಸ್ಕೂಲ್  ವಿದ್ಯಾರ್ಥಿಗಳಿಗೆ  ಶೂ -ಸಾಕ್ಸ್ ಅನುದಾನದಲ್ಲಿ ಸ್ಯಾಂಡಲ್ಸ್ ವಿತರಣಾ ಕಾರ್ಯಕ್ರಮವು ಗುರುವಾರ ಜರಗಿತು. 

 ಎಸ್ ಡಿಎಂಸಿ ಅಧ್ಯಕ್ಷ  ಭಾಸ್ಕರ ಎಸ್. ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಡುಮಾರ್ನಾಡು ಪಂಚಾಯತ್ ಅಧ್ಯಕ್ಷ  ವಾಸುದೇವ ಭಟ್, ವಾರ್ಡ್ ಮೆಂಬರ್   ಶಕುಂತಲಾ ಶೆಟ್ಟಿ , ಎಸ್ ಡಿ ಎಮ್ ಸಿ ಸದಸ್ಯ ರಾದ ಸುಗಂಧಿ ,ಆಶಾ ,ಸುಶೀಲಾ ಉಪಸ್ಥಿತರಿದ್ದರು .ಹೆತ್ತವರು, ಪೋಷಕರು,  ವಿದ್ಯಾರ್ಥಿಗಳು ಹಾಜರಿದ್ದರು. 

ಮುಖ್ಯ ಶಿಕ್ಷಕಿ ಡಾ. ರಾಜಶ್ರೀ ಬಿ.  ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಸುಜಾತಕುಮಾರಿ ಶೆಟ್ಟಿ ವಂದಿಸಿದರು.  ಸಮಾಜ-ವಿಜ್ಞಾನ ಶಿಕ್ಷಕ ಜಾನ್ ರೊನಾಲ್ಡ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.




Post a Comment

0 Comments