ಮನೆ ಕಳೆದುಕೊಂಡ ಚೆನ್ನಯ ದೈವಪಾತ್ರಿಗೆ ನೆರವಾದ ಗರಡಿ ಸಮಿತಿ

ಜಾಹೀರಾತು/Advertisment
ಜಾಹೀರಾತು/Advertisment

 ಮನೆ ಕಳೆದುಕೊಂಡ ಚೆನ್ನಯ ದೈವಪಾತ್ರಿಗೆ ನೆರವಾದ ಗರಡಿ ಸಮಿತಿ

ಪಣಪಿಲ ಕಲ್ಲೇರಿ ಕುಕ್ಕಿನಂತಾಯ ದೈವಸ್ಥಾನ ಹಾಗೂ ಅಳಿಯೂರು ಉಮಲತ್ತಡೆ ಬ್ರಹ್ಮ ಬೈದೇರುಗಳ ಗರಡಿಯ ವತಿಯಿಂದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ದೈವಪಾತ್ರಿ ಸಂತೋಷ್ ರವರಿಗೆ ಧನಸಹಾಯ ನೀಡಲಾಯಿತು.


ಅಳಿಯೂರು ಉಮಲತ್ತಡೆ ಗರಡಿಯಲ್ಲಿ ಬೈದರ್ಕಳ ನೇಮೋತ್ಸವ ಸಂದರ್ಭದಲ್ಲಿ ಚೆನ್ನಯ ಪಾತ್ರಿ ಶಿರ್ತಾಡಿಯ ಪಚ್ಚಾಡಿ ನಿವಾಸಿ ಸಂತೋಷ್ ಪೂಜಾರಿ ಯವರ ಮನೆ ವಿಪರೀತ ಸುರಿದ ಮಳೆಗೆ ಸಂಪೂರ್ಣ ಕುಸಿದು ಬಿದ್ದು ಅವರ ಸ್ಥಿತಿ ಅತಂತ್ರವಾಗಿತ್ತು. ಈ ಪರಿಸ್ಥಿತಿಯನ್ನು ಗಮನಿಸಿದ ಗರಡಿ‌ ಆಡಳಿತ ಮಂಡಳಿಯ ಪ್ರಮುಖರು ಸಮಿತಿಯ ವತಿಯಿಂದ ರೂಪಾಯಿ 25,000 ಸಹಾಯಧನವನ್ನು ಸಾಂತ್ವನದ ಮುಖೇನ ನೀಡಿದ್ದಾರೆ. 


ಇದರ ಜೊತೆಗೆ ಸಮಾಜ ಸೇವಕರು ಹಾಗೂ ಗರಡಿ ಸಮಿತಿಯ ಸದಸ್ಯರಾದ ರಮಾನಂದ‌ ಸಾಲಿಯಾನ್ ಹೆಗ್ಗಡೆ ಭಾಕ್ಯಾರು ಇವರು ವೈಯುಕ್ತಿಕ 10,000 ರೂಪಾಯಿಗಳನ್ನು ಅಂದರೆ ಒಟ್ಟಾಗಿ 35,000=00 ರೂ ನೀಡಲಾಯಿತು.


ಈ ಸಂದರ್ಭದಲ್ಲಿ ಮಜಲೋಡಿ ಗುತ್ತು ಪ್ರಮೋದ್ ಆರಿಗ ಹಾಗೂ ಹರ್ಷೇಂದ್ರ ಪಡಿವಾಳ್ ಹಾಗೂ ಗರಡಿ ಆಡಳಿತ ಸಮಿತಿ ಅಧ್ಯಕ್ಷರಾದ ಪ್ರವೀಣ್ ಭಟ್ ಕಾನಂಗಿ, ಚೆನ್ನಯ ಭಂಡಾರ ಮನೆಯ ಮುಖ್ಯಸ್ಥರಾದ ವಿಶ್ವನಾಥ್ ಕೋಟ್ಯಾನ್ ಹನ್ನೇರು, ಶಿರ್ತಾಡಿ ಗ್ರಾಮ‌ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಸುವರ್ಣ ಪೆರಿಬೆಟ್ಟು, ರವಿ ಸಾಲ್ಯಾನ್ ಪೆರಿಬೆಟ್ಟು, ಕಾಡ್ಯ ಪೂಜಾರಿ ಅರಂತೊಟ್ಟು ಪಣಪಿಲ, ಅಶೋಕ ಸುವರ್ಣ ದರೆಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments