ಮಳೆಯಿಂದ ಕೊಚ್ಚಿ ಹೋದ ಸೇತುವೆ:ಗ್ರಾಮಸ್ಥರಿಂದ ತಾತ್ಕಾಲಿಕ ಸೇತುವೆ ನಿರ್ಮಾಣ- ಪಂಚಾಯತ್ ಸದಸ್ಯರ ಸಾಥ್

ಜಾಹೀರಾತು/Advertisment
ಜಾಹೀರಾತು/Advertisment

 ಮಳೆಯಿಂದ ಕೊಚ್ಚಿ ಹೋದ ಸೇತುವೆ:ಗ್ರಾಮಸ್ಥರಿಂದ ತಾತ್ಕಾಲಿಕ ಸೇತುವೆ ನಿರ್ಮಾಣ- ಪಂಚಾಯತ್ ಸದಸ್ಯರ ಸಾಥ್ 


ಭಾರಿ ಮಳೆಗೆ ಮೂಡುಬಿದಿರೆಯ ಪಣಪಿಲ ಗ್ರಾಮದ ಪಣಪಿಲ ಮತ್ತು ಬೋರುಗುಡ್ಡೆಯನ್ನು ಸಂಪರ್ಕಿಸುವ ಬಿರ್ಮೆರಬೈಲು ಸೇತುವೆಯು ಮಳೆಯಿಂದ ಕೊಚ್ಚಿ ಹೋಗಿದ್ದು ಬಾರಿ ನಷ್ಟ ಮತ್ತು ಪ್ರಯಾಣಕ್ಕೆ ಅಡ್ಡಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರೆಲ್ಲ ಜೊತೆಗೂಡಿ ತಾತ್ಕಾಲಿಕ ಕಿರು ಸೇತುವೆಯನ್ನು ನಿರ್ಮಿಸಲಾಯಿತು. ನಡಿಗೆಯ ಮೂಲಕ ಸಂಚಾರವನ್ನು ಮಾಡಬಹುದಾದ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಗ್ರಾಮಸ್ಥರ ಜೊತೆಗೆ ಗ್ರಾಮ ಪಂಚಾಯತಿ ಸದಸ್ಯರಾದ ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ ಮುಂದಾಳತ್ವ ವಹಿಸಿ ತಾವೂ ಜೊತೆಗೂಡಿ ಕೆಲಸ ಮಾಡಿದರು.


ಹೇಮಾ ಅರ್ಥ್ ಮೂವರ್ಸ್ ಪ್ರಸನ್ನ ಕೋಟ್ಯಾನ್ ರವರು ಜೆಸಿಬಿ ಮ‌ೂಲಕ ಕಾಮಗಾರಿ ನಡೆಸಿದರು.


ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಬೇಲೊಟ್ಟು ಹಾಗೂ ತಾಲೂಕು ಪಂಚಾಯತ ಮಾಜಿ ಸದಸ್ಯರಾದ ರುಕ್ಕಯ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕೆಲಸಕ್ಕೆ ಹುರಿದುಂಬಿಸಿದರು. 


ಶಾಸಕ ಉಮನಾಥ್ ಕೋಟ್ಯಾನ್ ಘಟನೆ ನಡೆದ ಮರುದಿನವೇ ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದು ಈಗ ತಾತ್ಕಾಲಿಕವಾಗಿ ಪ್ರಯಾಣಿಸಲು ನಡೆಯಲು ಅನುಕೂಲವಾಗುವಂತೆ ಕಿರು ಸೇತುವೆ ನಿರ್ಮಿಸಲಾಯಿತು.

Post a Comment

0 Comments