ನಿಧನ: ಎಂ. ಕಮಲಾಕ್ಷ ಭಟ್ ಮೂಡುಬಿದಿರೆ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ: ಎಂ. ಕಮಲಾಕ್ಷ ಭಟ್ ಮೂಡುಬಿದಿರೆ

ಮೂಡುಬಿದಿರೆ :  ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಅರ್ಚಕ ಕುಟುಂಬದ ಹಿರಿಯರಾದ ಎಂ. ಕಮಲಾಕ್ಷ ಭಟ್( 84) ಆ.1ರಂದು  ನಿಧನ ಹೊಂದಿದರು.

ಅವರು ಅವಿವಾಹಿತರಾಗಿದ್ದರು.


ಮೂಲ್ಕಿ, ಕಾಪು ಮತ್ತು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಗಳಲ್ಲಿ ಅರ್ಚಕರಿಗೆ ಸಹಾಯಕರಾಗಿದ್ದ ಅವರು ಕಳೆದ ಎರಡೂವರೆ ದಶಕಗಳಿಂದ ಮೂಡುಬಿದಿರೆಯ ದೇವಳದಲ್ಲಿ ಸೇವೆ ಸಲ್ಲಿಸಿದ್ದರು.

ಕ್ರೀಡೆ, ರಂಗ ಭೂಮಿ, ಸಂಕೀರ್ತನಾ ರಂಗಗಳಲ್ಲಿ ಈ ಮೊದಲು ಸಕ್ರಿಯರಾಗಿದ್ದ ಅವರು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ಸತೀರ್ಥ (ಸಹಪಾಠಿ) .

Post a Comment

0 Comments