ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾಂತ್ಯ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾಂತ್ಯ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಮೂಡುಬಿದಿರೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡುಬಿದಿರೆ ತಾಲೂಕು ಇವುಗಳ ಸಹಭಾಗಿತ್ವದಲ್ಲಿ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. 

    ಜನಜಾಗೃತಿ ತಾಲೂಕು ಉಪಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ  ಕಾರ್ಯಕ್ರಮವನ್ನು  ಉದ್ಘಾಟಿಸಿದರು.


ಮಂಗಳೂರು ಯುನಿವರ್ಸಿಟಿ ಉಪನ್ಯಾಸಕ ಡಾ.ಪ್ರಭಾಕರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

 ಜನಜಾಗೃತಿ ವಲಯ ಅಧ್ಯಕ್ಷ ಜೋಸ್ಸಿ ಮೆನೇಜಸ್, ಪ್ರಾಂತ್ಯ ಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರ,  ಪ್ರಗತಿ ಬಂಧು ಒಕ್ಕೂಟದ ವಲಯ ಅಧ್ಯಕ್ಷ ಅರುಣ್ ಶೆಟ್ಟಿ,  ಪ್ರಾಂತ್ಯ ಒಕ್ಕೂಟದ ಅಧ್ಯಕ್ಷ ಸೋಮನಾಥ ಪೂಜಾರಿ, ಕಚೇರಿ ಪ್ರಬಂಧಕ  ಕಾರ್ತಿಕ್ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

 ಪ್ರಾಂತ್ಯ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನುಪಮ ಸ್ವಾಗತಿಸಿದರು. ಜ್ಯೋತಿನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅನಿತಾ ಪಿ ಬಳ್ಳಾಲ್ ಕಾರ್ಯಕ್ರಮವನ್ನು ನಿರೂಪಿಸಿದರು   ಸರಕಾರಿ ಪ್ರೌಢಶಾಲೆ ಪ್ರಾಂತ್ಯ ಇದರ ಸಹ ಶಿಕ್ಷಕಿ ರೂಪಾ. ಎಸ್. ಕಿಣಿ ಧನ್ಯ ವಾದಗೈದರು.

 ಕಲ್ಲಬೆಟ್ಟು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸ್ಮಿತಾ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

0 Comments