ರಸ್ತೆಗೆ ಚೆಲ್ಲಿದ ಜಲ್ಲಿಕಲ್ಲು: ಅಪಘಾತಕ್ಕೆ ಆಹ್ವಾನ

ಜಾಹೀರಾತು/Advertisment
ಜಾಹೀರಾತು/Advertisment

 ರಸ್ತೆಗೆ ಚೆಲ್ಲಿದ ಜಲ್ಲಿಕಲ್ಲು: ಅಪಘಾತಕ್ಕೆ ಆಹ್ವಾನ

ಮೂಡುಬಿದಿರೆ : ಇಲ್ಲಿನ ಕನ್ನಡ ಭವನದ ಬಳಿ ರಾಶಿ ಹಾಕಿರುವ ಜಲ್ಲಿಕಲ್ಲು ರಸ್ತೆಗೆ ಚೆಲ್ಲಲ್ಪಟ್ಟಿದ್ದು ವಾಹನ ಚಾಲಕರು ಜೀವ ಭಯದಿಂದ ಸಂಚರಿಸುವಂತ್ತಾಗಿದೆ.


 ಕನ್ನಡ ಭವನದ ಬಳಿ ಅಪಾಯಕಾರಿ ತಿರುವು ಇದ್ದು ಅಪಘಾತ ವಲಯವಾಗಿದೆ ಇಲ್ಲಿ ಮುಂದೆ ಮತ್ತು ಹಿಂದುಗಡೆಯಿಂದ ವಾಹನಗಳು  ಸಂಚಾರ ಮಾಡುವಾಗ ಪಾದಾಚಾರಿಗಳು ಜೀವಭಯದಿಂದಲೇ  ನಡೆದಾಡಿಕೊಂಡು ಹೋಗಬೇಕಾಗಿದೆ.


  ಇದೀಗ ಯಾವುದೋ ಉದ್ದೇಶಕ್ಕಾಗಿ ಪುರಸಭೆಯು ರಸ್ತೆಯ ಬದಿಯಲ್ಲಿ ಜಲ್ಲಿಕಲ್ಲು ಮತ್ತು ಮಿಕ್ಸೆಡ್ ಮಣ್ಣನ್ನು ತಂದು ಹಾಕಿದ್ದು ಜಲ್ಲಿಕಲ್ಲು ರಸ್ತೆಯನ್ನು ಆವರಿಸಿಕೊಂಡಿದೆ. 

 ಬೆಳಿಗ್ಗೆಯಿಂದ ಈಗಾಗಲೇ ಎರಡ್ಮೂರು ಜನ ದ್ವಿಚಕ್ರ ವಾಹನ ಸವಾರರು ಬಿದ್ದು ನೋವನ್ನು ಅನುಭವಿಸಿದ್ದಾರೆ. ಈ ಬಗ್ಗೆ ಪುರಸಭೆಯು ತಕ್ಷಣ ಕ್ರಮಕೈಗೊಂಡು ಸೂಕ್ತ ವ್ಯವಸ್ಥೆಯನ್ನು ಮಾಡಿ ವಾಹನ ಚಾಲಕರನ್ನು ಅಪಾಯದಿಂದ ಪಾರು ಮಾಡಬೇಕಾಗಿದೆ.

Post a Comment

0 Comments