ಪುರಸಭೆ ಚುನಾವಣೆ: ದ್ವಿತಿಯಾರ್ಧಕ್ಕೆ ಜಯಶ್ರೀ ಅಧ್ಯಕ್ಷೆ, ನಾಗರಾಜ್ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆ
ಮೂಡುಬಿದಿರೆ ಪುರಸಭೆಯ ದ್ವಿತೀಯಾರ್ಧ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಯಶ್ರೀ ಉಪಾಧ್ಯಕ್ಷರಾಗಿ ನಾಗರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿ ಚುನಾಯಿತರಾಗಿರುವ ಜಯಶ್ರೀ ಪ್ರಥಮ ಬಾರಿಗೆ ನಾಗರಾಜ್ ಪೂಜಾರಿ ದ್ವಿತೀಯ ಬಾರಿಯ ಪುರಸಭಾ ಸದಸ್ಯರಾಗಿದ್ದಾರೆ. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಮಮತಾ ಆನಂದ್ ಕುಮಾರ್ ಉಪಾಧ್ಯಕ್ಷ ಸ್ಥಾನಕ್ಕೆ ಕೊರಗಪ್ಪ ಸ್ಪರ್ಧಿಸಿದ್ದರು. ಆಗಸ್ಟ್ 21ರಂದು ಪುರಸಭೆಯ ಮೀಟಿಂಗ್ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ, ಮೂಡುಬಿದಿರೆ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಚುನಾವಣೆ ನಡೆಸಿಕೊಟ್ಟರು.
ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಹಿಂ.ವ.ಎ. ಮಹಿಳಾ ಮೀಸಲಾತಿ ದೊರೆತಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯರ ಪಾಲಾಗಿತ್ತು. ಪುರಸಭೆಯ 23 ಸದಸ್ಯ ಬಲದಲ್ಲಿ ಬಿಜೆಪಿ 13 ಕಾಂಗ್ರೆಸ್ 12 ಸದಸ್ಯ ಬಲ ಹೊಂದಿರುವುದರಿಂದ ಬಿಜೆಪಿ ಸರಳ ಬಹುಮತದ ಜಯ ಪಡೆದುಕೊಂಡಿದೆ. ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸಂಸದ ಬ್ರಿಜೇಶ್ ಚೌಟ ಅವರು ಬಿಜೆಪಿ ಪರವಾಗಿ ಮತದಾನಗೈದರು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಚುನಾವಣೆಯಲ್ಲಿ ಸಹಕರಿಸಿದರು.
0 Comments