ಕೋಟ ವಿರುದ್ಧ ದೂರು ಹಾಕಿ ಕೈಸುಟ್ಟುಕೊಂಡ ಸಿಎಂ ಸಿದ್ದರಾಮಯ್ಯ:ಕೋಟ ಹಾಕಿದ ಸವಾಲಿಗೆ ಸರ್ಕಾರವೇ ಕಂಗಾಲು!

ಜಾಹೀರಾತು/Advertisment
ಜಾಹೀರಾತು/Advertisment

 ಕೋಟ ವಿರುದ್ಧ ದೂರು ಹಾಕಿ ಕೈಸುಟ್ಟುಕೊಂಡ ಸಿಎಂ ಸಿದ್ದರಾಮಯ್ಯ:ಕೋಟ ಹಾಕಿದ ಸವಾಲಿಗೆ ಸರ್ಕಾರವೇ ಕಂಗಾಲು!

ವಾಲ್ಮೀಕಿ ನಿಗಮ ಹಗರಣ, ಎಸ್.ಸಿ. ಎಸ್.ಟಿ. ಅನುದಾನದ ದುರುಪಯೋಗ, ಮೂಡಾ ಹಗರಣ, ವಕ್ಫ್ ಬೋರ್ಡ್ ಹಗರಣ ಸೇರಿದಂತೆ ಅನೇಕ ಅರಾಜಕತೆಯ ಆಡಳಿತಕ್ಕೆ ಕಾರಣರಾಗುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದ್ದು ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕೌಂಟರ್ ನೀಡಲು ಮುಂದಾಗಿದ್ದರು.


ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಭ್ರಷ್ಟಾಚಾರದ ಚಾರ್ಜ್ ಶೀಟ್ ಬಿಡುಗಡೆಗೊಳಿಸಿದ್ದರು. ಸಂದರ್ಭದಲ್ಲಿ ಹಿಂದಿನ ಸರ್ಕಾರದ ಮಂತ್ರಿಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿಯವರ ಇಲಾಖೆಯ ಹಗರಣಗಳನ್ನು ಪ್ರಸ್ತಾಪಿಸಿ ಕೋಟ ಶ್ರೀನಿವಾಸ ಪೂಜಾರಿ ಭ್ರಷ್ಟಾಚಾರಿ ಎಂಬಂತೆ ಬಿಂಬಿಸಿದ್ದರು. ಇದರ ವಿರುದ್ಧ ಸಿಡಿದೆದ್ದಿರುವ ಪ್ರಸ್ತುತ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಬಹಿರಂಗ ಸವಾಲುಗಳನ್ನು ಹಾಕಿದ್ದಾರೆ. ಈ ಬಗ್ಗೆ ಪತ್ರಿಕಾ ಮಾಧ್ಯಮದ ಜೊತೆಗೆ ಮಾತನಾಡಿದ್ದು ಮಾತ್ರವಲ್ಲದೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರವನ್ನು ಬರೆದಿದ್ದಾರೆ. 'ತಾವು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ. ಅದಾಗಿಯೂ ನನ್ನ ಮೇಲೆ ಸಂಶಯ ಇದ್ದಲ್ಲಿ ಕೂಡಲೇ ಈ ಬಗ್ಗೆ ಸಿಬಿಐ ಅಥವಾ ಯಾವುದೇ ತನಿಖೆ ಸಂಸ್ಥೆಗಳಿಗೆ ನನ್ನ ವಿರುದ್ಧ ದೂರನ್ನು ಸಲ್ಲಿಸಬಹುದು. ಒಂದೊಮ್ಮೆ ನೀವು ದೂರು ಸಲ್ಲಿಸದಿದ್ದಲ್ಲಿ ನನ್ನ ಮೇಲಿರುವ ಆರೋಪ ಸುಳ್ಳೆಂದು ಒಪ್ಪಿಕೊಂಡು ಹೇಳಿಕೆ ನೀಡಬೇಕು. ಇದ್ಯಾವುದನ್ನೂ ಮಾಡದಿದ್ದಲ್ಲಿ ಒಂದು ವಾರಗಳ ನಂತರ ವಿಧಾನಸೌಧದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಕೂರುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.


ಸದ್ಯ ಪ್ರಾಮಾಣಿಕ ಹಾಗೂ ಕಳಂಕ ರಹಿತ ರಾಜಕಾರಣಿ ಎಂಬ ಶ್ರೇಯಸ್ಸು ಹೊಂದಿರುವ ಕೋಟ ಶ್ರೀನಿವಾಸ ಪೂಜಾರಿಯವರ ಈ ಸವಾಲಿನಿಂದ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೆ ಕಾಂಗ್ರೆಸ್ ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಕೋಟ ಶ್ರೀನಿವಾಸ ಪೂಜಾರಿಯವರ ಕಡೆಯಿಂದ ಯಾವುದೇ ಭ್ರಷ್ಟಾಚಾರ ಆಗಿರದಿದ್ದರೂ ಅದನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿ ಸರ್ಕಾರಕ್ಕೆ ಇಲ್ಲ. ಒಪ್ಪಿಕೊಂಡಲ್ಲಿ ಯೂಟರ್ನ್ ಸಿದ್ದರಾಮಯ್ಯ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಒಪ್ಪದಿದ್ದಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರ ಧರಣಿ ಸತ್ಯಾಗ್ರಹವನ್ನು ಎದುರಿಸಬೇಕಾಗುತ್ತದೆ. ಒಟ್ಟು ಮುಂದಿನ ನಡೆ ಯಾವ ರೀತಿ ಇರಬಹುದು ಎಂಬುದು ಕುತೂಹಲವನ್ನು ಸೃಷ್ಟಿಸಿದೆ.

Post a Comment

0 Comments