ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ

ಜಾಹೀರಾತು/Advertisment
ಜಾಹೀರಾತು/Advertisment

 ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ  ಪಡು ಕೊಣಾಜೆಯ ಬಾಂದವ್ಯ ಜ್ಞಾನ ವಿಕಾಸ  ಕೇಂದ್ರದಲ್ಲಿ ಪೌಷ್ಟಿಕ ಆಹಾರ  ಪ್ರಾತ್ಯಕ್ಷತೆ ಹಾಗೂ ಮಾಹಿತಿ ಕಾರ್ಯಕ್ರಮವು ಭಾನುವಾರ ನಡೆಯಿತು.

 ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್  ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ  ಉದ್ದೇಶ ಹಾಗೂ ಮಹತ್ವದ ಬಗ್ಗೆ  ಮಾಹಿತಿಯನ್ನು ನೀಡಿದರು.

ಆರೋಗ್ಯ ಸಹಾಯಕಿ ಚಂದ್ರಿಕಾ ಅವರು  ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ  ಪೌಷ್ಟಿಕ ಆಹಾರ ಎಂದರೇನು ಮತ್ತು ಅದರ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

 ಒಕ್ಕೂಟದ ಅಧ್ಯಕ್ಷ ಸಂದೀಪ್, ಶಿಕ್ಷಕ ಶಾಂತಿ ರಾಜ್ ಜೈನ್, ವಲಯದ ಮೇಲ್ವಿಚಾರಕ ವಿಠ್ಠಲ್,  ತಾಲೂಕು ಸಮನ್ವಯಧಿಕಾರಿ ವಿದ್ಯಾ ಸೇವಾಪ್ರತಿನಿಧಿ, ಒಕ್ಕೂಟದ ಉಪಾಧ್ಯಕ್ಷರು, ಕೇಂದ್ರದ ಸದಸ್ಯರು  ಉಪಸ್ಥಿತರಿದ್ದರು.  ಸಜಂಕ್  ದೋಸೆ ಮಾಡಿ ಪ್ರತ್ಯಕ್ಷತೆ ಮಾಡಿ, ಅದರ ಉಪಯೋಗ ದ ಬಗ್ಗೆ ತಿಳಿಸಲಾಯಿತು.

ಕಾ

ಕೇಂದ್ರದ ಸದಸ್ಯೆ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಸ್ವಾಗತಿಸಿ, ಶಶಿರೇಖಾ ಧನ್ಯವಾದವಿತ್ತರು.

Post a Comment

0 Comments