ನಳಿನ್,ಬ್ರಿಜೇಶ್ ಟೀಂ ಮಹಾರಾಷ್ಟ್ರ ಡಿಸಿಎಂ ಭೇಟಿ ಸಕ್ಸಸ್-2 ತಿಂಗಳಿಂದ ಬಂದ್ ಆಗಿದ್ದ ಉದ್ಯಮ ಮತ್ತೆ ಆರಂಭ-ಸಚ್ಚಿದಾನಂದ ಶೆಟ್ಟಿಯವರಿಂದ ಯಶಸ್ವಿ ಸಂಘಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಗುಡ್‌ನ್ಯೂಸ್:ನಳಿನ್,ಬ್ರಿಜೇಶ್ ಟೀಂ ಮಹಾರಾಷ್ಟ್ರ ಡಿಸಿಎಂ ಭೇಟಿ ಸಕ್ಸಸ್-2 ತಿಂಗಳಿಂದ ಬಂದ್ ಆಗಿದ್ದ ಉದ್ಯಮ ಮತ್ತೆ ಆರಂಭ-ಸಚ್ಚಿದಾನಂದ ಶೆಟ್ಟಿಯವರಿಂದ ಯಶಸ್ವಿ ಸಂಘಟನೆ


ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವಕನೊಬ್ಬ ಮದ್ಯ ಸೇವಿಸಿ ಕಾರು ಚಲಾಯಿಸಿದ್ದು ಇಬ್ಬರಿಗೆ ಡಿಕ್ಕಿ ಹೊಡೆದ ಕಾರಣ ವ್ಯತಪಟ್ಟಿದ್ದರಿಂದ ಪುಣೆಯ ಬಹುತೇಕ ಹೋಟೆಲ್ ಮತ್ತು ಬಾರ್ ಗಳ ಪರವಾನಗಿಯನ್ನು ಅಲ್ಲಿನ ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದರು. ಇದರಿಂದ ಕರ್ನಾಟಕ ಭಾಗದ ಅದರಲ್ಲೂ ತುಳುನಾಡಿನ 35ಕ್ಕೂ ಅಧಿಕ ಹೋಟೆಲ್ ಬಾರ್ ಉದ್ಯಮ ನಷ್ಟಕ್ಕೀಡಾಗಿತ್ತು. ಬರೋಬ್ಬರಿ ಎರಡು ತಿಂಗಳುಗಳ ಕಾಲ ಉದ್ಯಮ ಬಂದ್ ಅವಸ್ಥೆಯಲ್ಲಿತ್ತು.


ಈ ನಿಮಿತ್ತ ಮಹಾರಾಷ್ಟ್ರದ ಮೀರಾ ಬೈಂದರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಉದ್ಯಮಿ ಸಚ್ಚಿದಾನಂದ ಶೆಟ್ಟಿಯವರ ಸಂಘಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರು ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ‌ ಮುಂಬೈನ ಮಾಜಿ ಸಂಸದ ಗೋಪಾಲ ಶೆಟ್ಟಿಯವರ ಮುಂದಾಳತ್ವದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು.


ನಳಿನ್ ಕುಮಾರ್ ಕಟೀಲ್ ರವರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದ ಮಹಾ ಡಿಸಿಎಂ ಫಡ್ನವಿಸ್ ಬಳಿ ಮನವಿ ಮಾಡಲಾಗಿದ್ದು ಒಂದೇ ದಿನದಲ್ಲಿ ನಿಯೋಗದ ಭೇಟಿ ಫಲಪ್ರದವಾಗಿದೆ. ಕೂಡಲೇ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಬಳಿ ಮಾತುಕತೆ ನಡೆಸಿದ ಉಪಮುಖ್ಯಮಂತ್ರಿ ಫಡ್ನವಿಸ್ ಬಂದ್ ಆಗಿದ್ದ ಎಲ್ಲಾ ಬಾರ್ ಗಳನ್ನು ಮರು ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಉಪಮುಖ್ಯಮಂತ್ರಿಗಳ ಸೂಚನೆಯ ಬೆನ್ನಲ್ಲೇ 35ಕ್ಕೂ ಅಧಿಕ ಹೋಟೆಲ್ ಮತ್ತು ಬಾರ್ ಉದ್ಯಮಗಳು ಮತ್ತೆ ಆರಂಭವಾಗಿದೆ.


ಈ ನಿಮಿತ್ತ ನಳಿನ್ ಕುಮಾರ್ ಕಟೀಲು, ಬ್ರಿಜೇಶ್ ಚೌಟ ಹಾಗೂ ಮಹಾರಾಷ್ಟ್ರದ ಮಾಜಿ ಎಂಪಿ ಗೋಪಾಲ್ ಶೆಟ್ಟಿ ಮತ್ತು ಇತರರಿಗೆ ಅಲ್ಲಿನ ಹೋಟೆಲ್ ಅಸೋಸಿಯೇಷನ್ ಮುಖ್ಯಸ್ಥರಾದ ಗಣೇಶ ಶೆಟ್ಟಿ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಇದರಲ್ಲಿ ಬಹು ಮುಖ್ಯ ಪಾತ್ರ ವಹಿಸಿದ ತುಳುನಾಡಿನ ಮೂಲದ ಮಹಾರಾಷ್ಟ್ರ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿಯವರಿಗೂ ಗಣೇಶ್ ಶೆಟ್ಟಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Post a Comment

0 Comments