ಏಳನೇ ವೇತನ ಜಾರಿಗೆ ಸರಕಾರಿ ನೌಕರರ ಸಂಘ ಸಂತಸ
ಮೂಡುಬಿದಿರೆ:ರಾಜ್ಯ ಸರಕಾರಿ ನೌಕರರಿಗೆ ೭ನೇ ವೇತನವನ್ನು ಆಗಸ್ಟ್ ೧ ರಿಂದ ಅನ್ವಯವಾಗುವಂತೆ ಆದೇಶ ಮಾಡಿದ ಸರಕಾರಕ್ಕೆ ಅಭಿನಂದನೆಗಳನ್ನು ಮೂಡುಬಿದಿರೆ ತಾಲೂಕು ಸಂಘದ ಅಧ್ಯಕ್ಷರಾದ ಎಸ್. ನಾಗೇಶ್ ತಿಳಸಿದ್ದು ಇದರಿಂದ ಸರಕಾರಿ ನೌಕರರ ವೇತನ ೨೭.೫ ರಷ್ಟು ಹೆಚ್ಚಳವಾಗಲಿದೆ. ಶೇ೧೭ ರಷ್ಟು ಮಧ್ಯಂತರ ಪರಿಹಾರವನ್ನು ಈಗಾಗಲೇ ಕಲ್ಪಿಸಿದ್ದು ಉಳಿದಂತೆ ಶೇ ೧೦.೫ ರಷ್ಟು ಹೆಚ್ಚುವರಿ ವೇತನವನ್ನು ಆಗಸ್ಟ್ ೧ ರಿಂದ ಅನ್ವಯವಾಗುವಂತೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ೧೨ ಲಕ್ಷಕ್ಕೆ ಹೆಚ್ಚು ಉದ್ಯೋಗಿಗಳ ಹಾಗೂ ಪಿಂಚಣಿದಾರರಿಗೆ ಅನುಕೂಲವಾಗÀಲಿದೆ. ಇದರೊಂದಿಗೆ ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ತರಬೇಕು ಸರಕಾರಿ ನೌಕರರ ಮೇಲೆ ಅವಲಂಬಿತ ಕುಟುಂಬದ ಸದಸ್ಯರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕು. ೭ನೇ ವೇತನ ಜಾರಿಗೆ ಮಾಡಿದ್ದು ಸರಕಾರಿ ನೌಕರರಿಗೆ ತುಂಬಾ ಖುಷಿ ತಂದಿದೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಹಾಗೂ ಸಂಪುಟದ ಎಲ್ಲಾ ಮಂತ್ರಿಗಳಿಗೆ ಮೂಡುಬಿದಿರೆ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್ ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments