ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕಾ ಕ್ರಮ*

ಜಾಹೀರಾತು/Advertisment
ಜಾಹೀರಾತು/Advertisment

*ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕಾ ಕ್ರಮ* 

ಎಸ್.ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ಘಟಕಗಳ ವಿದ್ಯಾರ್ಥಿಗಳ ತಂಡದಿಂದ ದ.ಕ ಜಿಲ್ಲಾಧಿಕಾರಿಗಳ ಸಾಮಾಜಿಕ ಕಳಕಳಿಯ ಮಾತುಗಳಿಂದ ಪ್ರೆರೇಪಿತರಾಗಿ ಮಳೆಗಾಲದ ಮಹಾಮಾರಿಯಾದ ಡೆಂಗ್ಯೂ ವಿರುದ್ಧ ಹೋರಾಟಕ್ಕೆ ಚಿಕ್ಕ ಪ್ರಯತ್ನ ಮಾಡಲಾಯಿತು.

ದಿನಾಂಕ 20-07-2024 ಶನಿವಾರ ಮದ್ಯಾಹ್ನದ ಬಳಿಕ ಎನ್.ಎಸ್.ಎಸ್ ನ ಆಯ್ದ  65 ವಿದ್ಯಾರ್ಥಿಗಳ ತಂಡ ಕೆಲವು ಗುಂಪುಗಳಾಗಿ ಕಾಲೇಜಿನ ಆವರಣ, ಕೊಡಂಗಲ್ಲು ಪರಿಸರ, ಕೀರ್ತಿ ನಗರ , ಹುಡ್ಕೋ ಕಾಲೋನಿಗಳ ಸುಮಾರು 60ಕ್ಕೂ ಹೆಚ್ಚು ಮನೆಗಳು ಅಂಗಡಿ ಹಾಗೂ ಪರಿಸರಗಳಿಗೆ ಭೇಟಿ ನೀಡಿ ಮಳೆ ನೀರು ಶೇಖರಣೆಯಾಗುವ  ಎಳನೀರ ತೊಟ್ಟಿ, ಹಳೇ ಟೈಯರ್ ಗಳು, ಪ್ಲಾಸ್ಟಿಕ್ ಇತ್ಯಾದಿಗಳನ್ನು ತೆರವುಗೊಳಿಸಿ ಮನೆಯವರಿಗೆ ಪರಿಸರದಲ್ಲಿ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಜನಜಾಗೃತಿ ಮಾಹಿತಿಯನ್ನು ನೀಡಲಾಯಿತು. ಮುಂದುವರೆದು ಇದೇ ವಿದ್ಯಾರ್ಥಿಗಳು ತಮ್ಮ ಮನೆಯ ಆಸುಪಾಸಿನಲ್ಲೂ ಇದೇ ಕಾರ್ಯವನ್ನು ಮುಂದುವರಿಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲರಾದ ಜೆ ಜೆ ಪಿಂಟೋ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಎಂ ಹಾಗೂ ಗೋಪಾಲಕೃಷ್ಣ ಕೆ ಎಸ್ ಕೈಜೋಡಿಸಿದರು.

Post a Comment

0 Comments