ವಿಟಮಿನ್ "ಎ" ಅನ್ನಾಂಗ ದ್ರಾವಣ ನೀಡುವ ಕಾರ್ಯಕ್ರಮ
ಮೂಡುಬಿದಿರೆ: ಮಿತ್ತಬೈಲು ಅಂಗನವಾಡಿ ಕೇಂದ್ರದಲ್ಲಿ ಪುಟಾಣಿಗಳಿಗೆ ವಿಟಮಿನ್ "ಎ" ಅನ್ನಾಂಗ ದ್ರಾವಣವನ್ನು ನೀಡುವ ಕಾರ್ಯಕ್ರಮವು ಗುರುವಾರ ನಡೆಯಿತು.
ಆಶಾ ಕಾರ್ಯಕರ್ತೆ ಶೋಭಾ ನಾಯ್ಕ್ ಅವರು ವಿಟಮಿನ್ ಎ ಅನ್ನಾಂಗ ದ್ರಾವಣವನ್ನು ಯಾಕೆ ತೆಗೆದುಕೊಳ್ಳಬೇಕು ಮತ್ತು ಇದರ ಪ್ರಯೋಜನದ ಬಗ್ಗೆ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ದಿವ್ಯಾ ಅವರ ಅಧ್ಯಕ್ಷತೆಯಲ್ಲಿ ಬಾಲವಿಕಾಸ ಸಮಿತಿ ಸಭೆ ಮತ್ತು ಗ್ರಾಮ ಆರೋಗ್ಯ ಪೌಷ್ಠಿಕ ಮಾಹಿತಿ ಸಭೆಯನ್ನು ನಡೆಸಲಾಯಿತು.
ಪಂಚಾಯತ್ ಸದಸ್ಯೆಯಾದ ಸೌಮ್ಯ, ಸಮಿತಿಯ ಸದಸ್ಯ ಸುಂದರ್ ನಾಯ್ಕ್, ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ, ಸಹಾಯಕಿ ಸುಜಾತ ಉಪಸ್ಥಿತರಿದ್ದರು.
1 ವರ್ಷ 3 ತಿಂಗಳಿನಿಂದ 5 ವರ್ಷದವರೆಗಿನ ಮಕ್ಕಳಿಗೆ ವಿಟಮಿನ್ ಎ ಅನ್ನಾಂಗ ದ್ರಾವಣವನ್ನು ಹಾಕಲಾಯಿತು.
0 Comments