ಡಿ.ಜೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಮೂಡುಬಿದಿರೆ : ಇಲ್ಲಿನ ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ 2024-25 ನೇ ಸಾಲಿನ ವಿದ್ಯಾರ್ಥಿ ಪರಿಷತ್ ಸಂಘವನ್ನು ಶಾಲೆಯ ಹಳೆ ವಿದ್ಯಾರ್ಥಿನಿ ಸ್ಪೂರ್ತಿ ಜೈನ್ ಉದ್ಘಾಟಿಸಿದರು.
ಡಿ.ಜೆ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ.ಹೇಮರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಮಂತ್ರಿ ಮಂಡಲ, ಸಾಹಿತ್ಯ ಸಂಘ, ವಿಜ್ಞಾನ ಸಂಘ, ಕ್ರೀಡಾ ಸಂಘ, ಪರಿಸರ ಸಂರಕ್ಷಣೆ ಸಂಘಗಳ ಉದ್ಘಾಟನೆಯೂ ನಡೆಯಿತು.
2023-24 ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಗದು ಪುರಸ್ಕಾರ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ, ವಿದ್ಯಾರ್ಥಿ ಪರಿಷತ್ ಸಂಘದ ಸಂಯೋಜಕಿ ಲತಾ, ವಿದ್ಯಾರ್ಥಿ ಪರಿಷತ್ ಸಂಘದ ನಾಯಕ ಪ್ರಶ್ಚಿತ್, ಸುಪ್ರಿಯಾ, ಶೋಭಾ ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನಾಯಕ ಧ್ಯಾನ್ ಕೋಟ್ಯಾನ್ ವಂದಿಸಿದರು.
0 Comments