ಶೃಂಗೇರಿ ಪ್ರಯಾಣಿಕರಿಗೆ ಶುಭ ಸುದ್ಧಿ: ತನಿಕೋಡ್-ಮಾಳ ರಸ್ತೆ ಚತುಷ್ಪಥಕ್ಕೆ ಸಂಸದರ ಸಭೆ-ಶೀಘ್ರ ದೆಹಲಿಗೆ ನಿಯೋಗ
ಶೃಂಗೇರಿಯ ತನಿಕೋಡ್ ಗೇಟ್‌ನಿಂದ ಕಾರ್ಕಳದ ಮಾಳ ಗೇಟ್ ನವರೆಗೆ ಇರುವ 29 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನೆನೆಗುದ್ದಿಗೆ ಬಿದ್ದಿರುವ ಬಗ್ಗೆ ಇಂದು ಶೃಂಗೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆಯನ್ನು ನಡೆಸಿ ಸುಧೀರ್ಘ ಚರ್ಚೆಯನ್ನು ಮಾಡಲಾಯಿತು.
ಈ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ 438 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು ಸಂಬಂಧಿಸಿದ ಪ್ರದೇಶದ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕೆಲವೊಂದು ನಿಯಮಗಳು ಅಡ್ಡಿ ಉಂಟಾಗಿದೆ. ಸದ್ಯ ಈ ರಸ್ತೆಯು ವನ್ಯಜೀವಿ ಬೋರ್ಡ್‌ನ ಅಧೀನಕ್ಕೊಳಪಟ್ಟಿದ್ದು ಅದರ ಅನುಮತಿಯ ಅನುಮತಿ ಬಾಕಿ ಇದೆ.
ಸುಮಾರು 20 ಹೆಕ್ಟೇರ್ ಅರಣ್ಯ ಭೂ ಪ್ರದೇಶವು ಸ್ವಾಧೀನಕ್ಕೆ ಒಳಪಡಿಸಲಾಗತ್ತಿದ್ದು ಈ 20 ಹೆಕ್ಟೇರ್ ಪ್ರದೇಶದ ಬದಲಿಗೆ ಪ್ರದೇಶದ ಬದಲಿಗೆ 40 ಹೆಕ್ಟೇರ್ ಕಂದಾಯ ಇಲಾಖೆಯ ಭೂಮಿಯನ್ನು ಅರಣ್ಯ ಇಲಾಖೆಗೆ ಮೀಸಲಿಡಿಸುವಂತೆ ಸಂಸದಕೋಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು. ಮತ್ತು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ದೆಹಲಿಗೆ ತೆರಳಿ ರಾಷ್ಟ್ರೀಯ ಅರಣ್ಯ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲು ಸಮಯ ನಿಗದಿಪಡಿಸುವಂತೆ ಸೂಚಿಸಿದರು.
ಒಟ್ಟಾರೆ ಸುಧೀರ್ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಾಳ ತನಿಕೋಡ್ ಮತ್ತು ಮಾಳ ಗೇಟ್ ನವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಮತ್ತೊಮ್ಮೆ ಅಭಿವೃದ್ಧಿಯ ಜೀವ ಬಂದಂತಹ ವಾತಾವರಣ ನಿರ್ಮಾಣವಾಗಿ ಸಂಸದರನ್ನು ಆ ಪ್ರದೇಶದ ಜನ ಅಭಿನಂದಿಸಿದ್ದಾರೆ.
0 Comments