ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ

ಜಾಹೀರಾತು/Advertisment
ಜಾಹೀರಾತು/Advertisment

 ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ

ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮೂಡುಬಿದಿರೆ ನಿಶ್ಮಿತಾ ಟವರ್‍ಸ್‌ನ ಪ್ಯಾರಡೈಸ್ ಹಾಲ್‌ನಲ್ಲಿ ಬುಧವಾರ ಸಂಜೆ ನಡೆಯಿತು.

 


ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ಡಾ. ಮುರಳೀಕೃಷ್ಣ ಆರ್.ವಿ.ಯವರು ನೂತನ  ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ

ಹಿಂದಿನ ಅವಧಿಯಲ್ಲಿ ನಡೆದ ಪ್ರಗತಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ಯೋಜನೆಗಳನ್ನು ರೂಪಿಸುವಂತೆ ನೂತನ ಪದಾಧಿಕಾರಿಗಳಿಗೆ ಸಲಹೆಯಿತ್ತರು.

ಮುಖ್ಯ ಅತಿಥಿ ಜೇಸಿಐ ತರಬೇತುದಾರ ರಾಜೇಂದ್ರ ಭಟ್ ಕೆ.ಮಾತನಾಡಿ ಮಾನವ ಆಂತರಿಕ ಸೌಂದರ್‍ಯ ಹೆಚ್ಚಳಗೊಳಿಸಲು ಕಾರ್ಯತತ್ಪರನಾಗಬೇಕು. ಪರರ ಕಷ್ಟ, ಭಾವನೆಗಳಿಗೆ ಸ್ಪಂದಿಸುವುದು ಇಂದಿನ ಅಗತ್ಯ ಎಂದು ಹೇಳಿ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಅಸಾಮಾನ್ಯರಾಗಿ ಬೆಳೆದ ಉದಾಹರಣೆಗಳನ್ನು ನೀಡಿದರು.


ನೂತನ ಅಧ್ಯಕ್ಷ ಪೂರ್ಣಚಂದ್ರ ಜೈನ್ ಅಧಿಕಾರ ಸ್ವೀಕರಿಸಿ  ಮಾತನಾಡಿ ಹ್ಯಾಪಿ ಸ್ಕೂಲ್, ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಹಾಗೂ ಹಸುರೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ಈ ಬಾರಿ ನೀಡಲಾಗುವುದು. ಮತ್ತು ಈ ಹಿಂದಿನ ಯೋಜನೆಗಳನ್ನು ಮುಂದುವರೆಸಲಾಗುವುದು ಇದಕ್ಕೆ ತಮ್ಮೆಲ್ಲರ ಸಹಕಾರ ನಿರೀಕ್ಷಿಸುವುದಾಗಿ ಹೇಳಿದರು.

ವಲಯ 4ರ ಝೋನಲ್ ಲೆಫ್ಟಿನೆಂಟ್ ಪ್ರವೀಣ್ ಪಿರೇರಾ ಜಿ.ಎಸ್.ಆರ್. ಡಾ. ಹರೀಶ್ ನಾಯಕ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.


ಸೇವಾ ಯೋಜನೆಗಳು : ಕ್ಲಬ್‌ನ ಸೇವಾ ಚಟುವಟಿಕೆ ಅಂಗವಾಗಿ ಗುಂಡುಕಲ್ಲು ಅಂಗನವಾಡಿಗೆ ಸ್ಕೂಲ್ ಬ್ಯಾಗ್, ಈರ್ವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುರಸ್ಕಾರ, ಓರ್ವರಿಗೆ ಆರೋಗ್ಯ ನಿಧಿ, ಡಿಜೆ ಜಿ ಮಾದ್ಯಮ ಶಾಲೆ, ಲಾಡಿ ಮತ್ತು ಜ್ಯೋತಿನಗರ ಅಂಗನವಾಡಿ ಶಾಲೆ ಮಕ್ಕಳಿಗೆ ಸಮವಸ್ತ್ರದ ಕೊಡುಗೆ ನೀಡಲಾಯಿತು.


ಸನ್ಮಾನ: ಕ್ಲಬ್‌ನ ಸ್ಥಾಪಕಾಧ್ಯಕ್ಷ ಯುವರಾಜ ಜೈನ್ ಹಾಗೂ ರಶ್ಮಿತಾ ಜೈನ್ ದಂಪತಿಯ ಪುತ್ರಿ ಇಸ್ರೋದಲ್ಲಿ ನಡೆದ ಯುವಿಕಾ ಯಂಗ್ ಸೈಂಟಿಸ್ಟ್ ಅಭ್ಯರ್ಥಿ ಮೌಲ್ಯ ವೈ. ಆರ್. ಜೈನ್‌ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


ರೋಟರಿ ಸದಸ್ಯರುಗಳಾದ ಭರತ್ ಶೆಟ್ಟಿ, ಹರೀಶ್, ಡಾ. ಅಮರ್‌ದೀಪ್, ಶಂಕರ್ ಕೋಟ್ಯಾನ್, ಸಾರಿಕಾ ರಾಜೇಶ್ ಬಂಗೇರ, ಅತಿಥಿಗಳನ್ನು ಮತ್ತು ಕ್ಲಬ್ ನ  ಪ್ರಮುಖರನ್ನು  ಪರಿಚಯಿಸಿದರು.


ಅಪೇಕ್ಷಾ ಜೈನ್ ಪ್ರಾರ್ಥನೆಗೈದರು. ನಿಕಟಪೂರ್ವ ಅಧ್ಯಕ್ಷ ರೋನಿ ಫೆರ್ನಾಂಡೀಸ್ ಸ್ವಾಗತಿಸಿ, ನಿಕಟಪೂರ್ವ ಕಾರ್ಯದರ್ಶಿ ಅಜಯ್ ಡಿಸೋಜಾ ವರದಿ ಮಂಡಿಸಿದರು.

ನೂತನ ಕಾರ್ಯದರ್ಶಿ ಹರೀಶ್ ಎಂ.ಕೆ. ಧನ್ಯವಾದವಿತ್ತರು. ಪ್ರಣಮ್ಯ ಜೈನ್, ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments