ಅಧಿಕಾರ ಇಲ್ಲದಿದ್ದರೂ ಕಾರ್ಯಕರ್ತರ ಪರವಾಗಿ ನಿಂತ ಕಟೀಲ್-ಎಲ್ಲರೂ ಭೇಟಿಯಾಗಿದ್ದಾರೆ, ನಳಿನ್ ಮಾತ್ರ ಧನಸಹಾಯ ಮಾಡಿದ್ದಾರೆ
ನರೇಂದ್ರ ಮೋದಿಯವರು ಸತತ ಮೂರನೇ ಬಾರಿಅಧಿಕಾರ ಇಲ್ಲದಿದ್ದರೂ ಕಾರ್ಯಕರ್ತರ ಪರವಾಗಿ ನಿಂತ ಕಟೀಲ್-ಎಲ್ಲರೂ ಭೇಟಿಯಾಗಿದ್ದಾರೆ, ನಳಿನ್ ಮಾತ್ರ ಧನಸಹಾಯ ಮಾಡಿದ್ದಾರೆ
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವಿಜಯೋತ್ಸವದಲ್ಲಿ ಭಾಗವಹಿಸಿದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾದ ಹರೀಶ್ ಅಂಚನ್ ಹಾಗೂ ವಿನೋದ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲುರವರು ಇಬ್ಬರಿಗೂ ಧನಸಹಾಯ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲರೂ ಬಂದು ಭೇಟಿಯಾಗುವ ಧೈರ್ಯ ತುಂಬಿದ್ದಾರೆ. ಆದರೆ ನಳಿನ್ ಕುಮಾರ್ ಕಟೀಲುರವರು ಇಬ್ಬರಿಗೂ ಧನಸಹಾಯ ಮಾಡಿ ಮುಂದಿನ ದಿನಗಳಲ್ಲೂ ಸಹಕರಿಸುವ ಭರವಸೆ ನೀಡಿದ್ದಾರೆ. ಅಧಿಕಾರ ಇಲ್ಲದಿದ್ದರೂ ಅವರ ಕಾಳಜಿಗೆ ಮೆಚ್ಚಲೇಬೇಕು ಎಂದು ಕಾರ್ಯಕರ್ತರು ನಳಿನ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಭೇಟಿ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಕಟೀಲ್ "ನಮ್ಮ ಪ್ರತಿ ದೇವದುರ್ಲಭ ಕಾರ್ಯಕರ್ತ ಬಂಧುವಿನೊಂದಿಗೆ ನಮ್ಮ ಪಕ್ಷ ನಿಂತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ ಎಂದು ಮತೀಯವಾದಿಗಳು ಬಾಲ ಬಿಚ್ಚಿದರೆ ತಕ್ಕ ಪಾಠ ಕಲಿಸಲು ನಾವು ಸಿದ್ಧರಿದ್ದೇವೆ. ಆದರೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಶಾಂತಿ, ಸುವ್ಯವಸ್ಥೆಯನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು" ಎಂದು ಹೇಳಿದರು.
0 Comments