ಗ್ರಾಮಾಭಿವೃದ್ಧಿ ಯೋಜನೆಯ ಕೊಡಂಗಲ್ಲು ಒಕ್ಕೂಟದಿಂದ ಡೆಂಗ್ಯೂ & ಮಲೇರಿಯಾ ಮಾಹಿತಿ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮಾಭಿವೃದ್ಧಿ ಯೋಜನೆಯ ಕೊಡಂಗಲ್ಲು ಒಕ್ಕೂಟದಿಂದ ಡೆಂಗ್ಯೂ & ಮಲೇರಿಯಾ ಮಾಹಿತಿ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಂಗಲ್ಲು ಒಕ್ಕೂಟದ ತ್ರೈ ಮಾಸಿಕ ಸಭೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ರೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ ಶ್ರೀ ಮಹಾವೀರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

 ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಶಾಲಿನಿ ಅವರು ಡೆಂಗ್ಯೂ ಮತ್ತು ಮಲೇರಿಯಾ ರೋಗದ ಬಗ್ಗೆ ಮಾಹಿತಿ ನೀಡುತ್ತಾ, ಹಗಲಿನಲ್ಲಿ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ ಮತ್ತು ರಾತ್ರಿ ವೇಳೆಗೆ ಕಚ್ಚುವ ಸೊಳ್ಳೆಗಳಿಂದ ಮಲೇರಿಯಾ ಬರುತ್ತದೆ ಆದ್ದರಿಂದ ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತ ನೀರು ನಿಂತು ಅದರಲ್ಲಿ ಲಾರ್ವಗಳು ಉತ್ಪತ್ತಿಯಾಗದಂತೆ ತಡೆಯಬೇಕು. ಮಳೆ ನೀರು ಹೊಂಡಗಳಲ್ಲಿ ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ ಅವರು ಈ ಎರಡೂ ರೋಗಗಳ ಗುಣಲಕ್ಷಣಗಳನ್ನು ತಿಳಿಸಿದರು.


   ಯೋಜನೆಯ ಕೊಡಂಗಲ್ಲು ಒಕ್ಕೂಟದ ಅಧ್ಯಕ್ಷೆ ಪ್ರೇಮಶ್ರೀ ಅಧ್ಯಕ್ಷತೆ ವಹಿಸಿದ್ದರು.

  ಲೆಕ್ಕ ಪರಿಶೋಧಕ ನಾಗೇಶ್ ಅವರು ಇತರ ಸಂಘಗಳಲ್ಲಿ ಇರುವ ಬಡ್ಡಿಗಿಂತ ಯೋಜನೆಯ ಬಡ್ಡಿ ಎಷ್ಟು ಕಡಿಮೆಯಿದೆ ಮತ್ತು ಸದಸ್ಯರಿಗೆ ಲೋನ್ ತೆಗೆಯಲು ಹೇಗೆ ಸುಲಭ ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಮೇಲ್ವೀಚಾರಕರಾದ ವಿಠಲ್ ಅವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

   ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿ ಮಮತಾ, ಸುವಿದಾ ಸಹಾಯಕಿ ಜಯಶ್ರೀ ಉಪಸ್ಥಿತರಿದ್ದರು.

Post a Comment

0 Comments