ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕ, ಮೂಡಬಿದಿರೆ , ವತಿಯಿಂದ ಉತ್ತರ ಭಾರತ ಯಾತ್ರೆ,
ಮೂಡಬಿದಿರೆ : ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ಇದರ ವತಿಯಿಂದ ಉತ್ತರ ಭಾರತ ಯಾತ್ರೆಯನ್ನು ಏರ್ಪಡಿಸಲಾಗಿದ್ದು ದಿನಾಂಕ 6 - 6-24ರಂದು ಮುಂಜಾನೆ ಮಂಗಳೂರು ಕಂಕನಾಡಿ ರೈಲ್ವೆ ನಿಲ್ದಾಣದಿಂದ ಆರಂಭವಾಗಲಿದ್ದು, ಒಟ್ಟು 15 ದಿನಗಳ ಕಾಲ ಉತ್ತರ ಭಾರತದ ಹಿಂದೂ ಧಾರ್ಮಿಕ ಕೇಂದ್ರಗಳು,ದೇವಸ್ಥಾನಗಳು, ಪಾರಂಪರಿಕ ಸ್ಥಳಗಳು, ಇತಿಹಾಸ ಪ್ರಸಿದ್ಧ ಸ್ಥಳಗಳು, ಸಾಂಸ್ಕೃತಿಕ ಕೇಂದ್ರಗಳ ವೀಕ್ಷಣೆ ಸಹಿತ, ಯಾತ್ರಾರ್ತಿಗಳಿಗೆ ಬೇಕಾದ ಮಂಗಳೂರು ಶೈಲಿಯ ಶುದ್ಧ ಬ್ರಾಹ್ಮಣರ ಊಟೋಪಚಾರ, ಹವಾ ನಿಯಂತ್ರಿತ ಟ್ರೈನ್, ಹವಾ ನಿಯಂತ್ರಿತ ಬಸ್, ಹಾಗೂ ಹವಾ ನಿಯಂತ್ರಿತ ವಾಸ್ತವ್ಯ ಒಳಗೊಂಡಿರುತ್ತದೆ,
ವೇದಮೂರ್ತಿ ಗಿರಿಧರ ಭಟ್ ಇವರ ನೇತೃತ್ವದಲ್ಲಿ, ರಾಮಚಂದ್ರ ಪಂಡಿತ್ ಹಾಗೂ ಸುನಿಲ್ ಗರ್ದೆ ಸಹಕಾರದೊಂದಿಗೆ ಆತ್ಮ ನಿರ್ಭರ ಟೂರ್ಸ್ ಸಹಯೋಗದೊಂದಿಗೆ ಈ ಯಾತ್ರೆ ಇರಲಿದ್ದು, ಯಾತ್ರೆಯು ಐದು ಜನ ಮಾರ್ಗದರ್ಶಕರು, ಏಳು ಜನ ಪಾಕ ತಜ್ಞರು, ನಾಲ್ಕು ಜನ ಯಾತ್ರಾ ಸಹಾಯಕರು ಇರಲಿದ್ದು, ಹಿರಿಯ ನಾಗರಿಕರು ಸೇರಿದಂತೆ ಸುಮಾರು ನೂರು ಜನ ಯಾತ್ರಾದಿಗಳು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ
ಕರಾಡ ಬ್ರಾಹ್ಮಣ ಸುಧಾರಕ ಸಂಘ ಕಳೆದ ಕೆಲವಾರು ವರ್ಷಗಳಿಂದ ಸಮಾಜದ ಸಮಾನ ಮಸ್ಕರನ್ನು ಸೇರಿಸಿ, ಅತಿ ಕಡಿಮೆ ದರದಲ್ಲಿ ದೇಶದ ವಿವಿಧ ಭಾಗಗಳಿಗೆ ಯಾತ್ರೆಯನ್ನು ಏರ್ಪಡಿಸುತ್ತಿದ್ದು, ಯಾತ್ರೆಯು ಸಮಾಜದ ಜನಮನ್ನಣೆ ಗಳಿಸಿದೆ, ಕಳೆದ ಬಾರಿ ಸುಮಾರು 50 ಜನ ಕರಾಡ ಬ್ರಾಹ್ಮಣರು ಮಧ್ಯ ಭಾರತ ಯಾತ್ರೆಯ ಕೈಗೊಂಡದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ, ಸಮಾಜ ಬಾಂಧವರು, ಹಿತೈಷಿಗಳು, ಯಾತ್ರಿಗಳ ಸಂಬಂಧಿಕರು ಯಾತ್ರಾರ್ತಿಗಳಿಗೆ ಶುಭ ಹಾರೈಸಿದ್ದಾರೆ.
0 Comments