ವಿಶ್ವ ಪರಿಸರ ದಿನಾಚರಣೆ : ಅರಣ್ಯ ಇಲಾಖೆಯಿಂದ ವಿವಿಧ ಕಡೆಗಳಲ್ಲಿ ಗಿಡ ನೆಟ್ಟು ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಪರಿಸರ ದಿನಾಚರಣೆ : ಅರಣ್ಯ ಇಲಾಖೆಯಿಂದ ವಿವಿಧ ಕಡೆಗಳಲ್ಲಿ  ಗಿಡ ನೆಟ್ಟು ಆಚರಣೆ

ಮೂಡುಬಿದಿರೆ: ಇಲ್ಲಿನ  ಪುರಸಭೆ, ಸಿ.ಡಿ.ಡಿ ಇಂಡಿಯಾ ಎಂಬ ಎನ್ ಜಿ ಓ,  ರೋಟರಿಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ರೋಟರಿಕ್ಲಬ್ ಮಿಡ್ ಟೌನ್ , ರೋಟರಿಕ್ಲಬ್ ಆಫ್  ಟೆಂಪಲ್ ಟೌನ್ ಹಾಗೂ ಅರಣ್ಯ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಮೂಡುಬಿದಿರೆಯ ವಿವಿದೆಡೆಯಲ್ಲಿ ಗಿಡ ನೆಟ್ಟು ಪರಿಸರ ದಿನವನ್ನು ಆಚರಿಸಲಾಯಿತು.


  ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,  ರೋಟರಿ ಶಿಕ್ಷಣ ಸಂಸ್ಥೆ ಅದ್ಯಕ್ಷರಾದ ಪಿ ಎಂ ನಾರಾಯಣ್. ಡಾ! ಮುರಳೀಕೃಷ್ಣ, ನಾಗರಾಜ ಪೂಜಾರಿ, ಪುರಸಭೆ ಇಂಜಿನಿಯರ್ ಶಿಲ್ಪಾ, ಸಹಾಯಕ‌ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್, ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್  ಹಾಗೂ ಅರಣ್ಯ ಅಧಿಕಾರಿಗಳು, ಆಳ್ವಾಸ್ ಎನ್ ಸಿಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ಬಸವನ‌ಕಜೆ ಕೆರೆ ಸಮೀಪ 30 ಗಿಡಗಳು, ಕಡಲಕೆರೆ ಹತ್ತಿರ 30 ಗಿಡಗಳು, ರೋಟರಿ ಕ್ಲಬ್ ಆಫ್  ಮಿಡ್ ಟೌನ್, ರೋಟರಿ ಟೆಂಪಲ್  ಟೌನ್ ರವರು 30 ಗಿಡಗಳನ್ನು ನೆಟ್ಟರು.

 ನಂತರ ಆಳ್ವಾಸ್  ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ  ಎಸಿಎಫ್ ಸತೀಶ್, ವಲಯಾರಣ್ಯಾಧಿಕಾರಿ ಜಿ.ಡಿ. ದಿನೇಶ್ ಅವರು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

Post a Comment

0 Comments