ಅಚ್ಚರಕಟ್ಟೆ ಶ್ರೀ ಕುಂಭಕಂಠಿಣಿ ಭಜನಾ ಮಂಡಳಿಯ ಮೂರನೇ ವರ್ಷದ ಕುಣಿತ ಭಜನಾ ತರಬೇತಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ

ಅಚ್ಚರಕಟ್ಟೆ ಶ್ರೀ ಕುಂಭಕಂಠಿಣಿ ಭಜನಾ ಮಂಡಳಿಯ ಮೂರನೇ ವರ್ಷದ ಕುಣಿತ ಭಜನಾ ತರಬೇತಿ

ಮೂಡುಬಿದಿರೆ: ಪಡುಮಾರ್ನಾಡು ಅಚ್ಚರಕಟ್ಟೆ ಶ್ರೀ ಕುಂಭಕಂಠಿಣಿ ಭಜನಾ ಮಂಡಳಿಯ ಮೂರನೇ ವರ್ಷದ ಕುಣಿತ ಭಜನಾ ತರಬೇತಿ ಶಿಬಿರವನ್ನು ನಿವೃತ್ತ ಅಂಚೆಪಾಲಕರಾದ ಜಗತ್ಪಾಲ್ ಎಸ್.ಹೆಗ್ಡೆ ಅವರು ಉದ್ಘಾಟಿಸಿದರು.

  ನಂತರ ಮಾತನಾಡಿದ ಅವರು ಸತತ   ಎರಡು   ವರ್ಷಗಳಲ್ಲಿ   ಮನೆ ಮನೆ  ಭಜನಾ   ಕಾರ್ಯಕ್ರಮ,  ಧಾರ್ಮಿಕ  ಕ್ಷೇತ್ರದಲ್ಲಿ    ಭಜನಾ  ಕಾರ್ಯಕ್ರಮವನ್ನು  ನೀಡುತ್ತಾ ಬಂದಿದ್ದು ಎರಡು   ವರ್ಷಗಳಿಂದ  ಪೋಷಕರು   ಹಾಗೂ  ಊರ  ಪರವೂರ   ದಾನಿಗಳ  ಸಹಕಾರದಲ್ಲಿ  ಬಹಳ   ಅದ್ದೂರಿಯಾಗಿ    ವಾರ್ಷಿಕ   ಭಜನಾ   ಮಂಗಲೋತ್ಸವ   ಮಾಡಿ   ಪಕ್ಕದ    ಗ್ರಾಮದಲ್ಲೂ   ನಮ್ಮೂರಿನ   ಹೆಸರನ್ನು    ಪಸರಿಸಿ    ಈಗ   ಮೂರನೇ   ವರ್ಷದ  ತರಬೇತಿ   ಶಿಬಿರಕ್ಕೆ   ಚಾಲನೆ   ನೀಡಿದೆ.   ಯಾವುದೇ  ರಾಜಕೀಯ  ಪ್ರೇರಿತವಾಗಿರದ   ಭಜನಾ  ಮಂಡಳಿಯನ್ನು    ಇನ್ನಷ್ಟು   ಸಾಧನೆಗಾಗಿ   ಹುರಿದುಂಬಿಸುವುದು     ನಮ್ಮೂರಿನ  ಪ್ರತಿಯೊಬ್ಬ   ಪ್ರಜೆಯ    ಆದ್ಯ  ಕರ್ತವ್ಯ.  ಎಂದು  ಹೇಳಿದರು.

ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ ಪೂಪಾಡಿಕಲ್ಲು-ಕಡಂದಲೆ ಇದರ ಉಸ್ತುವಾರಿಗಳಾದ ಶಿವರಾಮ ಪೂಜಾರಿ ಮತ್ತು ಕಾರ್ತಿಕ್ ಅವರು ತರಬೇತುದಾರರಾಗಿ ಭಾಗವಹಿಸಿದ್ದರು.


ಕುಂಭಕಂಠಿಣಿ ಭಜನಾ ಮಂಡಳಿಯ ಸಂಚಾಲಕ ಪ್ರವೀಣ್ ಆರ್.ಕೋಟ್ಯಾನ್ ಮಾತನಾಡಿ "ಈ ಮಂಡಳಿಗೆ ಇನ್ನೂ ಕೆಲವು ಮಕ್ಕಳ ಸೇರ್ಪಡೆ ಇದೆ, ಭಜನಾ ಮಂಡಳಿ ಸಮಿತಿಗೆ ಇನ್ನಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಮಿತಿಯ ಕೆಲವರಿಗೆ ಭಡ್ತಿ ನೀಡುವ ಕೆಲಸ ಮಾಡಲಿದ್ದೇವೆ " ಎಂದರು.

  ಮಹಿಳಾ ಮಂಡಳಿ ಅಧ್ಯಕ್ಷೆ ಸೌಮ್ಯ ಬಡಕೋಡಿ, ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಕೃಷ್ಣಪ್ಪ, ನಿತಿನ್ ಪೂಜಾರಿ, ವಿವಿಧ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments