ಮೂಡುಬಿದಿರೆ ಪರಿಸರದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣಗಳು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಪರಿಸರದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣಗಳು



ಮೂಡುಬಿದಿರೆ : ಇಲ್ಲಿನ ಪುರಸಭಾ ವ್ಯಾಪ್ತಿ ಸಹಿತ ಪಂಚಾಯತ್ ವ್ಯಾಪ್ತಿಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ.

  ಒಂದು ದಿನ ಮಳೆ ಬಂದು ಮರುದಿನ ಬಿಸಿಲು ಕಾಣಿಸಿಕೊಳ್ಳುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಮಳೆಯ ನೀರು ನಿಂತಿರುವ ಜಾಗದಲ್ಲಿ ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ಲಾರ್ವಗಳು ಉತ್ಪತ್ತಿಯಾಗುತ್ತಿರುವುದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ.

  

ಗೂಡಂಗಡಿ ಬಳಿಗಳಲ್ಲಿ ಹಾಕಿರುವ ಸೀಯಾಳದ ಚಿಪ್ಪುಗಳು, ಬಾಟಲ್ ಗಳ ಮುಚ್ಚಳಗಳು ಮತ್ತು ತೆಂಗಿನ ಗೆರೆಟೆಗಳಲ್ಲಿ ನಿಂತಿರುವ ನೀರು ಹಾಗೂ ಅಧಿಕ ದಿನಗಳವರೆಗೆ ಬಕೆಟ್ ಗಳಲ್ಲಿ ತುಂಬಿಸಿಟ್ಟಿರುವ ನೀರು ಲಾರ್ವಗಳಿಗೆ ಆಶ್ರಯತಾಣಗಳಾಗಿವೆ.


  ಇದಲ್ಲದೆ ಮನೆಯ ಮನೆಯ ಸುತ್ತ ಮುತ್ತ ನಿಂತಿರುವ ನೀರನ್ನು ಹರಿದು  ಹೋಗುವಂತೆ ಮನೆ ಮಂದಿ ಮಾಡದೆ ಇರುವುದರಿಂದ ಅಲ್ಲಿಯೂ  ಲಾರ್ವಗಳು ಉತ್ಪತ್ತಿಯಾಗುತ್ತಿದ್ದು ಇವು ಕೂಡಾ ಡೆಂಗ್ಯೂ ಜ್ವರದ ಪ್ರಕರಣವನ್ನು ಹೆಚ್ಚಿಸುವಂತೆ ಮಾಡಿದೆ.


  ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು ಈ ಬಗ್ಗೆ ಜನರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ  ಜಾಗೃತೆಯನ್ನು ವಹಿಸಿಕೊಳ್ಳಬೇಕು. ಕುಡಿದು ಬಿಸಾಡಿದ ಸೀಯಾಳದಲ್ಲಿ, ಗೆರೆಟೆ, ಟಯರ್ ಮತ್ತು ಬಾಟಲಿ ಮತ್ತು ಮುಚ್ಚಳಗಳಲ್ಲಿ ನಿಂತಿರುವ ನೀರನ್ನು ಮಗುಚಿ ಹಾಕುವುದರಿಂದ ಡೆಂಗ್ಯೂ ಮತ್ತು‌ ಮಲೇರಿಯಾವನ್ನು ತಡೆಗಟ್ಟಲು ಸಾಧ್ಯವಿದೆ‌ : ಡಾ.ಅಕ್ಷತಾ ನಾಯಕ್ ( ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ)


ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Post a Comment

0 Comments