ಕೋಟೆಬಾಗಿಲಿನಲ್ಲಿ ಕಲಾ ಸಂಭ್ರಮ 2024

ಜಾಹೀರಾತು/Advertisment
ಜಾಹೀರಾತು/Advertisment

 ಕೋಟೆಬಾಗಿಲಿನಲ್ಲಿ ಕಲಾ ಸಂಭ್ರಮ 2024


ಯುವಕರು ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಿ-ಶಿಕ್ಷಕ ಅಜಿತ್ ಕುಮಾರ್ 

ಮೂಡುಬಿದಿರೆ: ಯುವ ಸಂಪತ್ತು ನಮ್ಮ ದೇಶದ ದೊಡ್ಡ ಆಸ್ತಿ.  ಹೇಳಿದರು.ಯುವಕರು ದುಶ್ಚಟಗಳ  ದಾಸರಾಗದೆ  ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಗೇರುಕಟ್ಟೆ ಪ್ರೌಢಶಾಲೆಯ ಶಿಕ್ಷಕ ಅಜಿತ್ ಕುಮಾರ್ ಜೈನ್  ಮಕ್ಕಳಿಗೆ ಚಿಕ್ಕಂದಿನಿಂದಲೆ ಮೌಲ್ಯಯುತವಾದ ಜೀವನದ ಪಾಠ ಅಗತ್ಯವಿದೆ ಎಂದರು.


ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಭಾನುವಾರ ದ.ಕ ಜಿಲ್ಲಾ ಹೆಗ್ಗಡೆ ಯುವ ಘಟಕ ಆಯೋಜಿಸಿದ ಕಲಾ ಸಂಭ್ರಮ 2024 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.  

ಜಿಲ್ಲಾ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಮಾತನಾಡಿ ಹೆಗ್ಗಡೆ ಯುವ ಘಟಕ ಸಮಾಜಕ್ಕೆ ಸ್ಪೂರ್ತಿಯಾಗಬಲ್ಲ ಕಾರ್ಯಕ್ರಮ ಹಮ್ಮಿಕೊಂಡಿದೆ. ಭವಿಷ್ಯದಲ್ಲಿ ಹೆಗ್ಗಡೆ ಸಮಾಜದ ವತಿಯಿಂದ ಒಳ್ಳೆಯ ವಸತಿ ಶಾಲೆಯನ್ನು ಆರಂಭಿಸುವ ಅಗತ್ಯ ಇದೆ ಎಂದರು. ಕಲಾ ಸಂಭ್ರಮದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ದೇವಳದ ಅರ್ಚಕರಾಗಿ ಸುಮಾರು 15 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ದತ್ತಾತ್ರೇಯ ಭಟ್ ಅವರನ್ನು ಪತ್ನಿ ಸುಶೀಲ ಜತೆಗೆ ಬೀಳ್ಕೊಟ್ಟ ಗೌರವಿಸಲಾಯಿತು. ನೂತನ ಅರ್ಚಕರಾಗಿ ಶಿವಪ್ರಸಾದ್ ಭಟ್ ಅವರನ್ನು ನೇಮಿಸಲಾಯಿತು. ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ್ ಕುಮಾರ್ ಹೆಗ್ಡೆ,  ಕಾರ್ಯದರ್ಶಿ ಶಂಕರ್ ಹೆಗ್ಡೆ, ಯುವ ಘಟಕದ ಅಧ್ಯಕ್ಷ ಪ್ರಮೋದ್ ಹೆಗ್ಡೆ,  ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಸುಂದರ ಹೆಗ್ಡೆ, ಮಾಜಿ ಕಾರ್ಯದರ್ಶಿ ಪ್ರಭಾಕರ್ ಹೆಗ್ಡೆ, ಹೆಬ್ರಿ ವಲಯ ಹೆಗ್ಗಡೆ ಸಂಘದ ಅಧ್ಯಕ್ಷ ಪ್ರವೀಣ್ ಹೆಗ್ಡೆ, ದೇವಸ್ಥಾನದ  ಮಾಜಿ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ವಿದ್ಯಾಧರ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಹೆಗ್ಡೆ ಉಪಸ್ಥಿತರಿದ್ದರು. ನಿಧಿ ಹೆಗ್ಡೆ ಸ್ವಾಗತಿಸಿದರು. ಧನ್ಯಾ ಹೆಗ್ಡೆ ನಿರೂಪಿಸಿದರು. ವೈಷ್ಣವ್ ಹೆಗ್ಡೆ ವಂದಿಸಿದರು.

Post a Comment

0 Comments