ಬಾರ್ ಗಳು ಓಪನ್ : ಮದ್ಯಪ್ರಿಯರಿಗೆ ಸಖತ್ ಖುಷಿ
ಮೂಡುಬಿದಿರೆ : ಚುನಾವಣಾ ಮತ ಎಣಿಕೆಯ ಹಿನ್ನೆಲೆಯಲ್ಲಿ ಜೂ.1ರಿಂದ 4ವರೆಗೆ ಬಂದ್ ಆಗಿರಬೇಕಿದ್ದ ಬಾರ್ ಗಳು ಒಂದು ದಿನಕ್ಕಿಂತ ಮೊದಲೇ ಓಪನ್ ಆಗುವ ಮೂಲಕ ಮದ್ಯಪ್ರಿಯರನ್ನು ಸಖತ್ ಖುಷಿಗೊಳಿಸಿದೆ.
ಲೋಕಸಭಾ ಚುನಾವಣೆಯ ಮತ ಎಣಿಕೆಯು ನಾಳೆ(ಜೂ.4) ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಎಲ್ಲಾ ಬಾರ್ ಗಳು ಜೂ.4ರವರೆಗೆ ಬಂದ್ ಎಂದು ಸರಕಾರವು ಸೂಚನೆ ನೀಡಿತ್ತು. ಆದರೆ ಜೂ.3ರಂದು ಶಿಕ್ಷಕರ ಕ್ಷೇತ್ರದ ಚುನಾವಣೆಯು ಮುಗಿಯುತ್ತಿದ್ದಂತೆ 4 ಗಂಟೆಯ ವೇಳೆಗೆ ಎಲ್ಲಾ ಬಾರ್ ಗಳು ಓಪನ್ ಆಗಿ ಮದ್ಯ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದ್ದುದು ಕಂಡು ಬಂತು.
ನಾಳೆ ಲೋಕಸಭಾ ಚುನಾವಣೆಯ ಮತ ಎಣಿಕೆಯು ನಡೆಯಲಿದ್ದರೂ ಅದಕ್ಕೂ ಮೊದಲ ದಿನವೇ ಸಂಜೆ 4 ಗಂಟೆಯಿಂದ 11 ಗಂಟೆವರೆಗೆ ಬಾರ್ ಗಳನ್ನು ಓಪನ್ ಮಾಡಲು ಸರಕಾರವು ಅನುಮತಿ ನೀಡುವ ಮೂಲಕ ಮದ್ಯ ಪ್ರಿಯರನ್ನು ಖುಷಿಗೊಳಿಸಿದೆ.
ಆದರೆ ನಾಳೆ ಮತ್ತೆ ಬಂದ್ ಮಾಡಲು ಸೂಚನೆ ನೀಡಿ ಇಂದೇ ಹೆಚ್ಚಿನ ಮದ್ಯವನ್ನು ಖರೀದಿಸಲು ಸಹಕಾರ ನೀಡಿದೆ.
0 Comments